ಮುಂಡಗೋಡ: ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡಸಾಲಿ ಗ್ರಾಮದ ಸರಕಾರಿ ಶಾಲೆಯ ಕಟ್ಟಡ ಕುಸಿದು ಹಾನಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಜರುಗಿದೆ.
ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಮೂಡಸಾಲಿ ಗ್ರಾಮದ ಸರಕಾರಿ ಶಾಲೆಯ ಕಟ್ಟಡ ನೆಲಕ್ಕೆ ಉರುಳಿದೆ. ಈ ಕಟ್ಟಡ ಬಹಳ ದಿನಗಳಿಂದಲೂ ಶಿಥಿಲವಾದ ಸ್ಥಿತಿಯಲ್ಲಿ ಇರುವುದರಿಂದ ಇಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿರಲಿಲ್ಲ. ಈ ಬಗ್ಗೆ ತೆರವುಗೊಳಿಸುವಂತೆ ಮುಖ್ಯೋಪಾದ್ಯಯರು ಹಾಗೂ ಶಾಲಾ ಸಮಿತಿಯವರು ಬಿ.ಇ.ಓ ಅವರಿಗೆ ಅರ್ಜಿ ನೀಡಿದ್ದರಿಂದ ಮೇಲಧಿಕಾರಿಗಳು ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ. ಅಲ್ಲಿ ಮಕ್ಕಳಿಗೆ ಪಾಠ ಮಾಡುವುದು ಬೇಡ ಎಂದಿದ್ದರಂತೆ.
ಮಂಗಳವಾರ ಬೆಳಗಿನ ಜಾವ ಸುರಿದ ಮಳೆಗೆ ಶಾಲಾ ಕಟ್ಟಡ ನೆಲಕ್ಕೂರುಳಿದೆ. ಸ್ಥಳಕ್ಕೆ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದಾರೆ. ಹಾಗೂ ಕಂದಾಯ ಇಲಾಖೆಯ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಮೂಡಸಾಲಿ ಶಾಲೆಯ ಕಟ್ಟಡ ಕುಸಿದು ಹಾನಿಯಾಗಿದೆ. ಈ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಆದ ಕಾರಣ ಶಾಲೆಯ ಮುಖ್ಯೋಪಾದ್ಯಯರಿಗೆ ಈ ಕಟ್ಟಡದಲ್ಲಿ ತರಗತಿಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿತ್ತು. ಅದಕ್ಕಾಗಿಯೇ ಕಳೆದ ಕೆಲವು ದಿನಗಳಿಂದಲೇ ಕಟ್ಟಡದಲ್ಲಿ ಮಕ್ಕಳಿಗೆ ತರಗತಿಯನ್ನು ತೆಗೆದುಕೊಳ್ಳದೆ ಹಾಗೆಯೇ ಇತ್ತು. ಸುದ್ದಿ ತಿಳಿದ ತಕ್ಷಣ ಶಾಲೆಗೆ ಭೇಟಿ ನೀಡಿ ಪರಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಲಾಗಿದೆ.
– ವೆಂಕಟೇಶ ಪಟಗಾರ್, ಬಿಇಓ