ಕಾರವಾರದಲ್ಲಿ ಆಗಸ್ಟ್ 17 ರಂದು ವಿದ್ಯುತ್ ವ್ಯತ್ಯಯ

ಕಾರವಾರ: ಕಾರವಾರದ ಉಪವಿಭಾಗದ ಪ್ರದೇಶಗಳಲ್ಲಿ ತುರ್ತು ವಿದ್ಯುತ್ ಲೈನ್ ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಆ. 17 ಬುಧವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕಾರವಾರದ ಕೆಹೆಚ್‌ಬಿ ಕಾಲೋನಿ, ಎನ್. ಎಚ್.66, ಎಂ. ಜಿ. ರೋಡ್, ಕೋರ್ಟ್ ರೋಡ್, ಸರ್ವೋದಯ ನಗರ, ಅಳ್ವೇವಾಡ, ಹಬ್ಬುವಾಡ, ಸಂಕ್ರಿವಾಡ, ಬೈತಕೋಲ್ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಹಾಗೂ ಹಣಕೋಣ, ಗೋಪಶಿಟ್ಟಾ, ಚಿತ್ತಾಕುಲಾ, ಅಮದಳ್ಳಿ, ಚೆಂಡಿಯಾ, ಅರ್ಗಾ, ತೋಡುರ, ಮುದಗಾ, ಬಿಣಗಾ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 3:30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.