ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಶಿಲ್ದಾರ್ ಶಂಕರ್ ಗೌಡಿ

ಮುಂಡಗೋಡ: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಶಂಕರ್ ಗೌಡಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.

ನಂತರ ಸ್ವಾತಂತ್ರ‍್ಯೋತ್ಸವ ಸಂದೇಶ ನೀಡಿ ಮಾತನಾಡಿ, ಈ ದಿನ ಪರಕೀಯರಿಂದ ಮುಕ್ತಿ ಸಿಕ್ಕು 75 ವರ್ಷಗಳಾಗಿವೆ. ಭಾರತದ ಸ್ವಾತಂತ್ರ‍್ಯ ತ್ಯಾಗ, ಬಲಿದಾನದ ಹೋರಾಟ ಮತ್ತು ಸಂಘರ್ಷದಿಂದ ಕೂಡಿತ್ತು. ಹೋರಾಟಗಾರರ ಸಂಖ್ಯೆಗೆ ಲೆಕ್ಕವೇ ಇಲ್ಲ. ಈ ಸಂದರ್ಭದಲ್ಲಿ ವೀರ ಶೂರರನ್ನು ಸ್ಮರಿಸೋಣ. ದೇಶಕ್ಕೆ ನಮ್ಮದೆ ಆದ ಕೊಡುಗೆ ನೀಡೋಣ ಎಂದರು.

ಜಿ.ಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ನಾವೆಲ್ಲ ಧನ್ಯರು. ಇದರ ಹಿಂದೆ ಅನೇಕ ನಾಯಕರ ಬಲಿದಾನದ ಇತಿಹಾಸವಿದೆ ಎಂದರು.

ವೇದಿಕೆಯ ಮೇಲೆ ಆಮಂತ್ರಣ ಪತ್ರಿಕೆಯಂತೆ ಅಧಿಕಾರಿಗಳಿಗೆ ಆಸನದಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿ ಕೊಡದೆ. ಸಾರ್ವಜನಿಕರು ಮುಂದಿನ ಆಸನದಲ್ಲಿ ಕುಳಿತುಕೊಂಡು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ವೇದಿಕೆಯ ಹಿಂಬದಿಯ ಸಾಲಿನಲ್ಲಿ ಕುಂತಿರುವುದು ಕಂಡು ಬಂತು. ವೇದಿಕೆಯ ಮುಂಭಾಗದಲ್ಲಿ ಕೆಲವೇ ಕೆಲವು ಜನಪ್ರತಿನಿಧಿಗಳು ಕುಳಿತರೆ ಅಧಿಕಾರಿಗಳು ಮಾತ್ರ ಹಿಂಬದಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಜಿಟಿ-ಜಿಟಿ ಮಳೆಯಲ್ಲೇ ನಿಂತು ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ಎಸ್.ಫಕೀರಪ್ಪ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.