ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಸಿದ್ದಾಪುರ: ಪಟ್ಟಣದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ ಆಪರೇಟಿವ್ ಲೀ. ಆಡಳಿತ ಮಂಡಳಿ ವತಿಯಿಂದ ಪಟ್ಟಣದ ಬಾಲಭವನದಲ್ಲಿ ಶನಿವಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.

ಕಳೆದ 2021-22 ನೇ ಸಾಲಿನಲ್ಲಿ 90% ಕ್ಕಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಸಿಬ್ಬಂದಿಗಳ ಮಕ್ಕಳಾದ ಕಿಶೋರ್ ಹೆಗಡೆ, ಶ್ರೇಯಸ್ ನಾಯ್ಕ, ಮನೋಜ್ ನಾಯ್ಕ, ಮೋನಿಕಾ ನಾಯ್ಕ ಮತ್ತು ಮಯೂರ್ ನಾಯ್ಕ ಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಿರ್ಗಮಿತ ನಿರ್ದೇಶಕ ಸದಾನಂದ ಕಾಮತ್ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಆನಂದ ಈರಾ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ವಿನಾಯಕ್ ನಾಯ್ಕ, ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.