ಒಂದು ಕಾಲದ ಬಾಲ್ಯ ಸ್ಣೇಹಿತರು, ಆದರೆ ಈ ಒಂದು ಚಿತ್ರ ಹೇಳುತ್ತಿದೆ ಹೇಗೆ ಬಾಳಬೇಕೆಂಬ ಕಥೆ…

ಇತ್ತೀಚೆಗೆ ಸಚಿನ್‌ ತೆಂಡೂಲ್ಕರ್‌ ಹಾಗೂ ವಿನೋದ್‌ ಕಾಂಬ್ಳಿ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದ ವೀಡಿಯೋ,ಫೋಟೋಗಳು ತುಂಬಾನೇ ವೈರಲ್‌ ಆಗುತ್ತಿರುವುದು ನೀವೂ ಗಮನಿಸಿರಬಹುದು. ಸಚಿನ್‌ ತೆಂಡೂಲ್ಕರ್ ಎಲ್ಲರಿಗೂ ಗೊತ್ತು, ಕ್ರಿಕೆಟ್‌ ದೇವರು ಎಂದು ಅಭಿಮಾನಿಗಳು ಆರಾಧಿಸುತ್ತಾರೆ.

ಆದರೆ ವಿನೋದ್‌ ಕಾಂಬ್ಳಿ ಎಂಬ ವ್ಯಕ್ತಿ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ, ಕ್ರಿಕೆಟ್‌ ಪ್ರೇಮಿಗಳಿಗೆ ಅದರಲ್ಲಿಯೂ ಸಚಿನ್ ಆಡುವ ಕಾಲದಿಂದಲೇ ಕ್ರಿಕೆಟ್‌ ನೋಡುತ್ತಿರುವವರಿಗೆ ಈ ವಿನೋದ್‌ ಕಾಂಬ್ಳಿ ಗೊತ್ತಿರಬಹುದು. ಆದರೆ ಈಗೀನ ಜನರೇಷನ್ ಅವರಿಗೆ ಈ ವ್ಯಕ್ತಿಯ ಪರಿಚಯವಿರಲಿಲ್ಲ, ಆದರೆ ಆದರೆ ಒಂದು ವಾರದಿಂದ ಇಡೀ ಭಾರತದ ಗಮನ ಸೆಳೆದಿದ್ದಾರೆ ವಿನೋದ್‌ ಕಾಂಬ್ಳಿ, ಅದೂ ಎಲ್ಲರಿಗೂ ಬದುಕಿನ ಪಾಠ ತಿಳಿಸುವ ರೀತಿಯಲ್ಲಿ ಕಂಡು ಬಂದಿದ್ದಾರೆ, ಅವರ ಬಗ್ಗೆ ತಿಳಿದವರು ಹೇಗಿದ್ದ ವ್ಯಕ್ತಿ ಹೇಗಾದ ಎಂದು ಮಾತನಾಡುತ್ತಿದ್ದರೆ.

ಶಿಸ್ತಿನ ಮಹತ್ವ ಅಶಿಸ್ತಿನ ಪರಿಣಾಮ ಎಲ್ಲವೂ ಈ ಒಂದೇ ಫೋಟೋದಲ್ಲಿ ಕಾಣಬಹುದು

ಸಚಿನ್‌ ತೆಂಡೋಲ್ಕರ್‌ ಒಬ್ಬ ಆ ವ್ಯಕ್ತಿಯನ್ನು ಮಾತನಾಡಿಸುತ್ತಿರುವ ಫೋಟೋವದು,ಕೂತಿರುವ ಆ ವ್ಯಕ್ತಿ ತುಂಬಾನೇ ದುರ್ಬಲರಾಗಿರುವಂತೆ ಕಾಣುತ್ತಾರೆ, ಎದ್ದು ನಿಲ್ಲಲು ಇನ್ನೊಬ್ಬರ ಸಹಾಯ ಬೇಕು, ಕೃಶ ಶರೀರ, ಬದುಕಿನಲ್ಲಿ ಸೋತ ಹತಾಶೆ ಆ ಮುಖದಲ್ಲಿ ಎದ್ದು ಕಾಣುತ್ತಿತ್ತು, ಆ ವ್ಯಕ್ತಿಯನ್ನು ಮಾತನಾಡಿಸಿದವರು ಸಚಿನ್‌ ತೆಂಡೂಲ್ಕರ್. ಹೇಗೆ ಬದುಕಬಾರದು ಎಂಬುವುದಕ್ಕೆ ಉದಾಹರಣೆ ವಿನೋದ್‌ ಕಾಂಬ್ಳಿಯಾದರೆ, ಹೇಗೆ ಬದುಕಬೇಕು ಎಂಬುವುದಕ್ಕೆ ಉದಾಹರಣೆ ಸಚಿನ್‌ ತೆಂಡೂಲ್ಕರ್. ಯಶಸ್ಸು ಬಂದಾಗ ಅದನ್ನು ಉಳಿಸಿ ಬೆಳೆಸುವುದು ಕಲಿಯಬೇಕು ಮನುಷ್ಯ ಆ ಚಿತ್ರದಲ್ಲಿ ಜೀವನದಲ್ಲಿ ಸೋತು ಸುಣ್ಣವಾದ ವಿನೋದ್‌ ಕಾಂಬ್ಳಿ ಇದ್ದಾರಲ್ಲಾ? ಒಂದು ಕಾಲದ ಸ್ಟಾರ್‌ ಕ್ರಿಕೆಟಿಗ, ಅವರು ಸರಿಯಾಗಿ ಬದುಕುವುದು ಕಲಿತಿದ್ದರೆ ಇಂದು ಸಚಿನ್‌ ತೆಂಡೂಲ್ಕರ್‌ಗೆ, ರಾಹುಲ್‌ ದ್ರಾವಿಡ್, ಗಂಗೂಲಿ ಹೀಗೆ ಮಾಜಿ ಕ್ರಿಕೆಟಿಗರು ನಡೆಸುತ್ತಿರುಯವ ಲಕ್ಷುರಿ ಬದುಕು ಇದೆಯಲ್ಲಾ ಅದನ್ನು ಇವರಿಗೂ ನಡೆಸಲು ಸಾಧ್ಯವಾಗ್ತಾ ಇತ್ತು, ಆದರೆ ತಾನು ಮಾಡಿದ್ದೇ ಸರಿ ಎಂಬ ದುರಾಂಹಕಾರದಿಂದ ವರ್ತಿಸಿದರ ಫಲ ನಡೆಸುತ್ತಿರುವ ಕಷ್ಟದ ಬದುಕು, ಇವರ ಹಣೆ ಬರಹಕ್ಕೆ ವಿಧಿಯನ್ನು ದೂರಲು ಸಾಧ್ಯವಿಲ್ಲ, ಕೈಯಾರೆ ಬದುಕನ್ನು ಸರ್ವನಾಶ ಮಾಡಿಕೊಂಡ ವ್ಯಕ್ತಿ ವಿನೋದ್‌ ಕಾಂಬ್ಳಿ.

ಕ್ರಿಕೆಟ್‌ನಲ್ಲಿ ಚಿಕ್ಕ ಪ್ರಾಯದಲ್ಲಿ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ವಿನೋದ್‌ ಕಾಂಬ್ಳಿ ಶಿಸ್ತಿನ ಬದುಕು ನಡೆಸಲಿಲ್ಲ

ಆ ದಿನಗಳಲ್ಲಿ ಸಚಿನ್‌ರಂತೆಯೇ ಫೀಲ್ಡ್‌ನಲ್ಲಿ ರನ್‌ಗಳ ಮಳೆ ಸುರಿಸಿದ್ದ,ವರ್ಲ್ಡ್‌ ಕಪ್‌ನಲ್ಲಿಯೂ ಆಡಿದ್ದ ವಿನೋದ್‌ ಕಾಂಬ್ಳಿ ಬದುಕಿನಲ್ಲಿ ಒಂದೊಂದು ರುಪಾಯಿಗೂ ಕಷ್ಟ ಪಡಪಡುವಂಥ ಪರಿಸ್ಥಿತಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಫೀಲ್ಡ್‌ನಲ್ಲಿ ಸಮಯ ಕಳೆಯುವ ಬದಲಿಗೆ ಬಾರ್‌ನಲ್ಲಿ ಸಮಯ ಕಳೆಯಲಾರಂಭಿಸಿದರು, ಒಳ್ಳೆಯ ಸ್ನೇಹಿತರಿಗಿಂತ ತಪ್ಪು ದಾರಿಗೆಳೆಯುವ ಸ್ನೇಹಿತರೇ ಸುತ್ತ-ಮುತ್ತ ಇದ್ದರು, ಕೈಯಲ್ಲಿ ಬೇಕಾದಷ್ಟು ಹಣವಿತ್ತು, ನಾನು ಮಾಡಿದ್ದೇ ಸರಿ ಎಂಬ ಅಹಂ ಈ ಎಲ್ಲಾ ವರ್ತನೆಗಳು ಅವರ ಕ್ರಿಕೆಟ್‌ ಕರಿಯರ್‌ ಬಂದ್‌ ಮಾಡಿತು.

ಬಂದ ಹಣವನ್ನೂ ಸರಿಯಾಗಿ ಬಳಸಲೂ ಇಲ್ಲ

ಕೆಲವರು ಸಿಕ್ಕಿದ ಹಣವನ್ನು ಹೂಡಿಕೆ ಮಾಡಿ ಅದರಿಂದ ಬದುಕಿನ ದಾರಿ ಕಂಡು ಕೊಳ್ಳುತ್ತಾರೆ, ಆದರೆ ಇವರು ಆ ರೀತಿಯೂ ಮಾಡಲಿಲ್ಲ, ಕ್ರಿಕೆಟ್‌ನಿಂದ ಬಂದ ಹಣವನ್ನೂ ಬಾರ್‌, ಹೆಣ್ಣು, ಲಕ್ಷುರಿ ಅಂತ ಖರ್ಚು ಮಾಡಲಾರಂಭಿಸಿದರು, ಪರಿಣಾಮ ಕೈಯಲ್ಲಿರುವ ಹಣ ಖಾಲಿಯಾಗಲಾರಂಭಿಸಿತು, ವೈಯಕ್ತಿಕ ಬದುಕಿನಲ್ಲಿಯೂ ಎಡವಿದರು, ಎರಡು ಮದುವೆಯಾದರು, ಹೀಗೆ ತಮ್ಮದೇ ತಪ್ಪಿನಿಂದಾಗಿ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಸೋತು ಈಗ ಅವರ ಪರಿಸ್ಥಿತಿ ಈ ರೀತಿಯಾಗಿದೆ, ಆಹಾರ ಸೇವಿಸಲು ಬೇರೆಯವರ ಬಳಿ ಬೇಡುವ ಪರಿಸ್ಥಿತಿ ಬಂದಿದೆ.