181.6 kph ವೇಗದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್..! ದಂಗಾದ ಪ್ರೇಕ್ಷಕರು

Australia vs India, 2nd Test: ಅಡಿಲೇಡ್​​ ಓವಲ್​​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ 180 ರನ್​​ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ.

ಬರೋಬ್ಬರಿ 181.6 kph... ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಬರೋಬ್ಬರಿ 181.6 kph ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ತೋರಿಸಲಾಗಿದೆ. ಅಂದರೆ ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಬೌಲ್. ಆದರೆ ಇಂತಹದೊಂದು ವಿಶ್ವ ದಾಖಲೆಯನ್ನು ಖುದ್ದು ಸಿರಾಜ್​ ಕೂಡ ನಂಬಲು ಸಿದ್ಧರಿರಲಿಲ್ಲ.
ಬರೋಬ್ಬರಿ 181.6 kph… ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್ ಬರೋಬ್ಬರಿ 181.6 kph ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ತೋರಿಸಲಾಗಿದೆ. ಅಂದರೆ ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಬೌಲ್. ಆದರೆ ಇಂತಹದೊಂದು ವಿಶ್ವ ದಾಖಲೆಯನ್ನು ಖುದ್ದು ಸಿರಾಜ್​ ಕೂಡ ನಂಬಲು ಸಿದ್ಧರಿರಲಿಲ್ಲ.
ಏಕೆಂದರೆ ಅದು ಸ್ಪೀಡ್ ಗನ್ (ಸ್ಪೀಡ್ ಮೀಟರ್) ಎಡವಟ್ಟಿನಿಂದಾಗಿ ತೋರಿಸಲಾದ ವೇಗವಾಗಿತ್ತು. ಸಾಮಾನ್ಯವಾಗಿ 130-140ರ ಅಸುಪಾಸಿನಲ್ಲಿ ಚೆಂಡೆಸೆಯುವ ಸಿರಾಜ್ ಎಸೆದ 25ನೇ ಓವರ್​ನ 5ನೇ ಎಸೆತದ ವೇಗವನ್ನು ಅಡಿಲೇಡ್ ಮೈದಾನದ ಸ್ಕ್ರೀನ್​ನಲ್ಲಿ 181.6 kph ವೇಗ ಎಂದು ತಪ್ಪಾಗಿ ತೋರಿಸಲಾಗಿತ್ತು. ಇದನ್ನು ನೋಡಿ ಪ್ರೇಕ್ಷಕರು ಕೂಡ ದಂಗಾದರು.

ಆದರೆ ಆ ಬಳಿಕ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ. ಸ್ಪೀಡ್ ಗನ್​ ಎರರ್​ನಿಂದಾಗಿ ಮೊಹಮ್ಮದ್ ಸಿರಾಜ್ ಅವರ ಎಸೆತವು 181.6 kph ವೇಗದಿಂದ ಕೂಡಿತ್ತು ಎಂದು ತೋರಿಸಲಾಗಿದ್ದು, ಆದರೆ ಆ ಚೆಂಡು 135ರ ಅಸುಪಾಸಿನ ವೇಗದಲ್ಲಿ ಸಾಗಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಒಂದು ಕ್ಷಣಕ್ಕೆ ದಂಗಾದ ಪ್ರೇಕ್ಷಕರು ನಿರಾಳರಾದರು.
ಆದರೆ ಆ ಬಳಿಕ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ. ಸ್ಪೀಡ್ ಗನ್​ ಎರರ್​ನಿಂದಾಗಿ ಮೊಹಮ್ಮದ್ ಸಿರಾಜ್ ಅವರ ಎಸೆತವು 181.6 kph ವೇಗದಿಂದ ಕೂಡಿತ್ತು ಎಂದು ತೋರಿಸಲಾಗಿದ್ದು, ಆದರೆ ಆ ಚೆಂಡು 135ರ ಅಸುಪಾಸಿನ ವೇಗದಲ್ಲಿ ಸಾಗಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಒಂದು ಕ್ಷಣಕ್ಕೆ ದಂಗಾದ ಪ್ರೇಕ್ಷಕರು ನಿರಾಳರಾದರು.3 / 5
ಅಂದಹಾಗೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್​ನ ಇಂಗ್ಲೆಂಡ್ ವಿರುದ್ಧದ​ ಪಂದ್ಯದಲ್ಲಿ ಅಖ್ತರ್ 161.3 kph ವೇಗದಲ್ಲಿ ಚೆಂಡೆಸೆದು ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಅಡಿಲೇಡ್​​ ಓವಲ್​​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ 180 ರನ್​​ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ. ಇದೀಗ ದ್ವಿತೀಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮುಂದುವರೆಸಿದೆ.