ಭಟ್ಕಳ: ಕಳೆದ ತಿಂಗಳು ಮುರ್ಡೇಶ್ವರ ಮಾವಳ್ಳಿ-1 ರ ಜನತಾ ಕಾಲೋನಿಯಲ್ಲಿ ನಡೆದ ಮಳೆ ಕಳ್ಳತನ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮುರ್ಡೇಶ್ವರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ನೇಪಾಳ ಮೂಲದ ನರೇಶ
ನರೇಂದ್ರ ಅಂಗಬಹದ್ದೂರ ಠಾಕೂರ ಹಾಗೂ
ಜನಕ ಜಯಬಹದ್ದೂರ ಭಂಡಾರಿ ಎಂದು ತಿಳಿದು ಬಂದಿದೆ. ಆರೋಪಿಗಳು ಕಳೆದ ಜುಲೈ 18 ರ ಮಧ್ಯರಾತ್ರಿ ದೇವೇಂದ್ರ ಈರಪ್ಪ ನಾಯ್ಕ ಎನ್ನುವವರ ಮನೆ ಕಳ್ಳತನ ಮಾಡಿದ್ದರು.
ತಂದೆ ನಿಧನರಾಗಿದ್ದ ಹಿನ್ನೆಲೆ ಅವರ ಕಾರ್ಯ ಮಾಡಲು ಹೆಂಡತಿಯೊಂದಿಗೆ ಜನತಾ ಕಾಲೋನಿಯಲ್ಲಿರುವ ತಮ್ಮ ಹಳೆಯ ಮನೆಗೆ ಹೊಗಿ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಮರು ದಿನ ಬೆಳ್ಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಮುರಿದು ಕಳ್ಳತನ ಮಾಡಿರುದನ್ನು ಗಮನಿಸಿದ ಮನೆಯ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಕಳ್ಳತನ ಮಾಡಿರುವುದು ತಿಳಿದಿದೆ. ಕಪಾಟಿನಲ್ಲಿದ್ದ ಸುಮಾರು 2 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮುರ್ಡೇಶ್ವರ ಠಾಣೆ ಪೊಲೀಸರು ನೇಪಾಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 100.6 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.