ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ಕುರಿತು ಸ್ಪಷ್ಟನೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ

ಕಾರವಾರ :- ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಪ್ರಕರಣದ ಎ1 ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ನೀಡಿದ ಕುರಿತು ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ವಕ್ಫ್ ಮಂಡಳಿ ಚುನಾವಣಾ ಪ್ರಕ್ರಿಯೆ ಇರುವ ವ್ಯವಸ್ಥೆಯಾಗಿದೆ. ವಕ್ಫ್ ಮಂಡಳಿಗೆ ಬಿಜೆಪಿಯಿಂದ 50% ಜನ ಹಾಗೂ ವಿರೋಧ ಪಕ್ಷದಿಂದ 50% ಜನ ಕೊಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಾವು ಕೊಟ್ಟಿರುವ ಪಟ್ಟಿ ಸರಿಯಿತ್ತು. ವಿರೋಧ ಪಕ್ಷದವರು ಕೊಟ್ಟ ಪಟ್ಟಿಯಲ್ಲಿ ಅಣ್ಣಿಗೇರಿ ಇದ್ದರು. ಇದು ಸರಿಯಲ್ಲ ಎಂದು ಹೇಳಿದಾಗ ಈ ಪಟ್ಟಿಯನ್ನು ರದ್ದು ಮಾಡಿದ್ದಾರೆ. ನಮಗೆ ಬಹುಮತ ಇಲ್ಲದ ಕ್ಷೇತ್ರವಾದ್ದರಿಂದ ಮುಂದೆ ಹೆಚ್ಚಿನ ಮಾಹಿತಿ ಕೊಡುತ್ತೇವೆ ಎಂದರು.

ಇನ್ನು ರಾಷ್ಟ್ರಧ್ವಜಕ್ಕಿಂತ ಬಿಜೆಪಿಗೆ ಭಗವದ್ವಜದ ಮೇಲೆ ಪ್ರೀತಿ ಹೆಚ್ಚು ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು, ಸಿದ್ದರಾಮಯ್ಯನವರ ಮಾನಸಿಕತೆ ಇದ್ದವರೇ ತಿರಂಗ ದ್ವಜ ಹಾರಿಸುತ್ತೇವೆ ಎಂದು ನಮ್ಮ ಸಂಘದ ಕಡೆ ಬಂದಿದ್ದಾರೆ. ಅವರಿಗೆ ಸಿಹಿ ಕೊಟ್ಟು ಸ್ವಾಗತ ಮಾಡಲು ಹೋದಾಗ ವಾಪಾಸ್ ಹೋಗಿದ್ದಾರೆ ಎಂದು ಟಾಂಗ್ ಕೊಟ್ಟರು.