ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ನೂತನ ಮಹಾದ್ವಾರದ ಶಿಲಾನ್ಯಾಸ ಮಾಡಿದ ಶಾಸಕ ಸುನೀಲ್ ನಾಯ್ಕ್

ಭಟ್ಕಳ: ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ನೂತನ ಮಹಾದ್ವಾರದ ಶಂಕುಸ್ಥಾಪನೆಯನ್ನು ಶಾಸಕ ಸುನೀಲ ನಾಯ್ಕ ಮಾಡಿದರು.

ಭಟ್ಕಳದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿರುವ ಶಾಸಕ ಸುನೀಲ ನಾಯ್ಕ್ ತಮ್ಮ ವೈಯಕ್ತಿಕ ವೆಚ್ಚದಲ್ಲಿ ವಿವಿಧೆಡೆ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಇದೀಗ ಆಸರಕೇರಿಯ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಮಹಾದ್ವಾರವನ್ನು ತಮ್ಮ ವೈಯಕ್ತಿಕ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಇಂದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ , ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಾಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಶಾಸಕ ಜೆ.ಡಿ ನಾಯ್ಕ, ನಾಮಧಾರಿ ಸಮಾಜದ ಗೌರವಾಧ್ಯಕ್ಷ ಎಂ.ಆರ್.ನಾಯ್ಕ, ನಾಮಧಾರಿ ಸಮಾಜದ ಉಪಾಧ್ಯಕ್ಷರಾದ ಭಾವಾನಿ ಶಂಕರ ನಾಯ್ಕ, ಸಮಾಜದ  ಪ್ರಧಾನ ಕಾರ್ಯದರ್ಶಿ ಮಾಸ್ತಿ ಜೆ.ನಾಯ್ಕ , ಸಮಾಜದ ಹಿರಿಯ ಮುಖಂಡರಾದ ಎಲ್.ಎಸ್.ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು