ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ನಡೆದ ಬೈಕ್ ರ‍್ಯಾಲಿ

ಹೊನ್ನಾವರ: ಪಟ್ಟಣದ ಶರಾವತಿ ವೃತ್ತದಲ್ಲಿ ತಾಲೂಕಾ ಬಿಜೆಪಿ ಯುವಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ನಿಮಿತ್ತ ಬೈಕ್ ರ‍್ಯಾಲಿ ಶುಕ್ರವಾರ ನಡೆಯಿತು.

ರ‍್ಯಾಲಿಗೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಬಂದ 75ನೇ ವರ್ಷವನ್ನು ಅತಿ ವಿಜೃಂಭಣೆಯಿಂದ ಎಲ್ಲರ ಮನೆಯ ಮೇಲೆ ತ್ರಿವರ್ಣ ಧ್ವಜವನ್ನ ಹಾರಿಸುವುದರ ಮೂಲಕ ಮೂರು ದಿನದ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮಾಡಬೇಕು ಎನ್ನುವ ಒಂದು ಸಂಕಲ್ಪವನ್ನು ಮಾಡಿದ್ದಾರೆ.

ಇದರ ಹಿನ್ನೆಲೆ ಇಂದು ಹೊನ್ನಾವರ ತಾಲೂಕಾ ಬಿಜೆಪಿ ವತಿಯಿಂದ ಬೈಕ್ ರ‍್ಯಾಲಿ ನಡೆಸಲಾಯಿತು. ಆಗಸ್ಟ್ 15 ರ ಸಾಯಂಕಾಲ ಸೂರ್ಯಾಸ್ತ ಪೂರ್ವದಲ್ಲಿ ಧ್ವಜವನ್ನ ಇಳಿಸುವಂತ ಕಾರ್ಯ ಮಾಡಬೇಕು. ಇಳಿಸಿದ ನಂತರ ಧ್ವಜವನ್ನ ಜೋಪಾನವಾಗಿ ಇಡುವಂತದ್ದು ಸಹ ಬಹಳ ಮುಖ್ಯವಾಗಿರುತ್ತದೆ. ಧ್ವಜದ ಮೇಲೆ ಕೇಸರಿ, ಬಿಳಿ ಮತ್ತು ಹಸಿರು ವರ್ಣ ಸರಿ ಸಮಾನವಾಗಿ ಇದೆಯೇ ಎಂದು ನೋಡಿಕೊಳ್ಳಿ. ರಾಷ್ಟ್ರ ಧ್ವಜಕ್ಕೆ ಬಹಳ ಮಹತ್ವ ಇದೆ ಅದಕ್ಕೆ ಎಲ್ಲೂ ಸಹ ಅವಮಾನ ಆಗದ ರೀತಿಯಲ್ಲಿ ಎಲ್ಲರು ಬಹಳ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಪ,ಪಂ ಅಧ್ಯಕ್ಷ ಶಿವರಾಜ ಮೇಸ್ತ, ಶಿವಮೊಗ್ಗ ಜಿಲ್ಲೆ ಬಿಜೆಪಿ ಸಹಪ್ರಭಾರಿ ಎನ್ ಎಸ್ ಹೆಗಡೆ, ತಾಲೂಕಾದ್ಯಕ್ಷ ರಾಜು ಬಂಢಾರಿ, ಮುಖಂಡರಾದ ಎಮ್ ಎಸ್ ಹೆಗಡೆ, ನಾಗರಾಜ ನಾಯ್ಕ ತೊರ್ಕೆ, ಎಮ್ ಜಿ ಭಟ್, ವಿನೋದ್ ನಾಯ್ಕ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು,ಕಾರ್ಯಕರ್ತರು ಪಾಲ್ಗೊಂಡಿದ್ದರು.