ಹುಬ್ಬಳ್ಳಿ, ಸೆ.19: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಹಾರಿಗಳ ಪುಂಡಾಟ ಪ್ರಕರಣ ದಾಖಲಾಗಿದೆ. ಯುಪಿ, ಬಿಹಾರ ಮೂಲದ ಪುಂಡರು ಪುಂಡಾಟ ಮೆರೆದಿದ್ದಾರೆ. ಹುಬ್ಬಳ್ಳಿಯ ವಿಜಯನಗರದ ವಡ್ಡರ ಓಣಿಯಲ್ಲಿ ಗಾಂಜಾ (Ganja) ಮತ್ತಿನಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಸಂಜಯ್, ಸೈಫ್ ಎಂಬ ಇಬ್ಬರು ಯುವಕರಿಗೆ ಯುಪಿ, ಬಿಹಾರ ಮೂಲದ ಪುಂಡರ ಗ್ಯಾಂಗ್ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದೆ.
ನಾಗೇಂದ್ರ, ಅನಿಕೇತ್, ಸರವನ್, ಬಬ್ಲೂಚೌಹಾಣ್ನಿಂದ ಕೃತ್ಯ ನಡೆದಿದೆ. ಈ ಬಿಹಾರಿ ಪುಂಡರು ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದರು. ಇದನ್ನು ಪ್ರಶ್ನೆ ಮಾಡಲು ಹೋಗಿದ್ದ ಯುವಕರಿಗೆ ಚಾಕು ಇರಿಯಲಾಗಿದೆ. ಹುಬ್ಬಳ್ಳಿಯ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.