ಆನ್​ಲೈನ್​ ಗೇಮ್​ ವ್ಯಾಮೋಹಕ್ಕೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ, ಜುಲೈ 10: ಆನ್​ಲೈನ್​ ಗೇಮ್​ ವ್ಯಾಮೋಹಕ್ಕೆ ಸಿಲುಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಮೃತ ದರ್ದೈವಿ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್​ನಲ್ಲಿ ಓದುತ್ತಿದ್ದನು. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ನೆಲಸಿದ್ದನು. ರಾಕೇಶ್ ಪ್ರತಿದಿನವೂ ಆನ್​ಲೈನ್​ ಗೇಮ್​ ಆಡುತ್ತಿದ್ದನು. ​ಆನ್​ಲೈನ್ ಗೇಮ್​ನಿಂದ ಹಣ ಕಳೆದುಕೊಂಡಿದ್ದ ರಾಕೇಶ್​ ಮನನೊಂದು ತಾನು ಇದ್ದ ಕೋಣೆಯ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಸತಿ ನಿಲಯಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.