ಹುಬ್ಬಳ್ಳಿ, ಆಗಸ್ಟ್ 22: ನಾನು ನಿಮ್ಮ ಮಗಳನ್ನು ಪ್ರೀತಿ ಮಾಡುತ್ತಿದ್ದೇನೆ. ಒಂದು ವೇಳೆ ನಿರಾಕರಿಸಿದರೆ ನೇಹಾ ಹಿರೇಮಠಳಂತೆ ಕೊಲೆ ಮಾಡುವುದು ಸಾರ್ವಜನಿಕವಾಗಿ ಬೆದರಿಕೆ ಹಾಕಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಾಲಕಿ ಪೋಷಕರಿಂದ ದೂರು ನೀಡಿದ್ದು, ಅಬ್ಬಾಸ್ ಎಂಬಾತನ ವಿರುದ್ದ ಸೆಕ್ಷನ್ 363, 376, 511, ಐಪಿಸಿ ಯೂ/ಎಸ್ 74, 329 (4), 351(3) ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಅಪ್ರಾಪ್ತ ಬಾಲಕಿಯು ಶಾಲೆಗೆ ಹೋಗುವಾಗ ಅಬ್ಬಾಸ್ ಸ್ನೇಹ ಮಾಡಿಕೊಂಡಿದ್ದಾನೆ. ನಂತರ ಕೆಲ ಬಾರಿ ಗಾರ್ಡನ್ಗೂ ಕರೆದುಕೊಂಡು ಹೋಗಿದ್ದಾನೆ. ಜೂನ್ 22 ರಂದು ಶಾಲೆಯಿಂದ ಮನೆಗೆ ಬಿಡುವುದಾಗಿ ಹೇಳಿ ರೇವಡಿಹಾಳ ಬ್ರಿಡ್ಜ್ ಹತ್ತಿರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚರಕ್ಕೆ ಯತ್ನಿಸಿರುವ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್ ಗಲಾಟೆ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ದ ದೂರು ದಾಖಲಾಗಿತ್ತು.