ವಲಯ ಮಟ್ಟದಪ್ರೌಢಶಾಲಾ ಕ್ರೀಡಾಕೂಟ- ಭಟ್ಕಳದ ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವಿರಾಗ್ರಣಿ ಪ್ರಶಸ್ತಿ

ಭಟ್ಕಳ: ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರಾಧಿಕಾರಿ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ, ಭಟ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಿದ್ಯಾಭಾರತಿ ಪ್ರೌಢಶಾಲೆ ಆಯೋಜಿಸಿರುವ, ನ್ಯೂ ಇಂಗ್ಲೀಷ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ 100 ಮೀಟರ್ ಓಟ, 200 ಮೀಟರ್ ಓಟ, 400 ಮೀಟರ್ ಓಟ , 110ಮೀ. ಹರ್ಡಲ್ಸ್, 400 , ಉದ್ದ ಜಿಗಿತ, ತ್ರಿವಿಧ ಜಿಗಿತ, 4×100 ಮತ್ತು 4×400 ರಿಲೆಯಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟ, ತ್ರಿವಿಧ ಜಿಗಿತ, 400 ಹರ್ಡಲ್ಸ್, ಎತ್ತರ ಜಿಗಿತ, 1,500 ಮೀಟರ್ ಓಟ, ಹ್ಯಾಮರ್‌ ಎಸೆತ, 400 ಮೀಟರ್ ಓಟ, 800 ಮೀಟರ್ ಓಟ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಬಾಲಕೀಯರ ವಿಭಾಗದಲ್ಲಿ ವಿಭಾಗದಲ್ಲಿ 200 ಮೀಟರ್ ಓಟ, ಉದ್ದ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್ ಎಸೆತ, ಹ್ಯಾಮರ್ ಎಸೆತ, 4×100 ರಿಲೆ ಪ್ರಥಮ ಸ್ಥಾನ ಹಾಗೂ 100 ಮೀಟರ್ ಓಟ, 400 ಮೀಟರ್ ಓಟ, ಎತ್ತರ ಜಿಗಿತ, 800 ಮೀಟರ ಓಟ, 4×100 ರಿಲೆ ದ್ವಿತೀಯ ಸ್ಥಾನ ಹಾಗೂ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದೆ.

ಗುಂಪು ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಕಬ್ಬಡ್ಡಿ, ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ ಹಾಗೂ ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್, ವ್ಹಾಲಿಬಾಲ್ ಪ್ರಥಮ ಸ್ಥಾನ ಹಾಗೂ ಬಾಲಕಿಯರು ಕಬ್ಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು. ವೈಯಕ್ತಿಕ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಪೃಥ್ವಿ ಸುರೇಶ್ ನಾಯ್ಕ ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ ಪಟಗಾರ್ ವಲಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಲಯ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನಕ್ಕೆ ಕಾರ್ಯಕರ್ತರ ದೈಹಿಕ ಶಿಕ್ಷಕರಾದ ಮಹೇಶ್ ನಾಯ್ಕ ಹಾಗೂ ಸಹಕರಿಸಿದ ಎಲ್ಲಾ ಶಿಕ್ಷಕರಿಗೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ .