ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಬಾರಿ ಗಾಳಿಮಳೆಯ ಪರಿಣಾಮ ಆಶಾ ಶ್ರೀಧರ ಮೋಗೆರ ರವರ ಮನೆ ಮತ್ತು ದೋಣಿಯ ಮೇಲೆ ಮರ ಬಿದ್ದು ತೀರಾ ಹಾನಿಯಾಗಿತ್ತು. ಫಲಾನುಭವಿಗೆ ತಾತ್ಕಾಲಿಕ ಮನೆ ದುರಸ್ಥಿಗೆ ನೇರವಾಗಲು ಪೂಜ್ಯ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ.25000/- ಸಹಾಯಧನ ಮಂಜೂರು ಮಾಡಿದರು.
ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಗಣೇಶ .ಡಿ. ನಾಯ್ಕ, ಧರ್ಮಸ್ಥಳ ಸಂಘಗಳ ಮುಂಡಳ್ಳಿ ಒಕ್ಕೂಟದ ಅಧ್ಯಕ್ಷರಾದ ದಿನೇಶ ನಾಯ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗೋವಿಂದ ಮೋಗೆರ, ಬಿಜೆಪಿ ಮುಂಡಳ್ಳಿಯ ಸ್ಥಳೀಯ ಮುಖಂಡ ಕೃಷ್ಣಪ್ಪ ನಾಯ್ಕರವರ ಉಪಸ್ಥಿತಿಯಲ್ಲಿ ಮಂಜೂರಾತಿ ಪತ್ರ ವಿತರಣೆ ಮಾಡಿದರು.. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಗೋವಿಂದ ಮೋಗೆರ ರವರು ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ಪರಮ ಪೂಜ್ಯ ಹೆಗ್ಗಡೆಯವರು ಜನರ ಕಷ್ಟಕ್ಕೆ ತುರ್ತು ಸ್ಪಂದನೆ ನೀಡಿ ನೇರವಿನ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.