ದಾಂಡೇಲಿ: ತಾಲೂಕಿಗೆ 500 ಹಾಸಿಗೆಯ ಇಎಸ್ಐ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಇಎಸ್ಐ ಉಪ ಪ್ರಾದೇಶಿಕ ಕಛೇರಿ ಮಂಜೂರು ಮಾಡುವಂತೆ ಒತ್ತಾಯಿಸಿ ಅಸಂಘಟಿತ ಕಾರ್ಮಿಕರ ಸಂಘಟನೆಯಿಂದ ತಹಶೀಲ್ದಾರ ಶೈಲೇಶ ಪರಮಾನಂದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕಾರ್ಮಿಕರ ವೇತನದ ಮಿತಿಯನ್ನು ತೆಗೆದುಹಾಕಿ ಇಎಸ್ಐ ಆರೋಗ್ಯ ವಿಮಾ ಸೌಲಭ್ಯ ಬಯಸುವ ಎಲ್ಲಾ ಕಾರ್ಮಿಕರಿಗೆ ಯೋಜನೆ ವಿಸ್ತರಿಸುವ ಹಾಗೂ ನಗರದಲ್ಲಿ ಇಎಸ್ಐ ಮಾಲಿಕತ್ವದಲ್ಲಿ ಸುಮಾರು 7 ಎಕರೆ ಜಾಗವಿದೆ. ಈ ಜಾಗದಲ್ಲಿ ಇರುವ ಆಸ್ಪತ್ರೆಯನ್ನು ಉತ್ತಮ ದರ್ಜೆಯ ಏರಿಸಲು ಅನುಕೂಲವಿದ್ದು, ಜಿಲ್ಲೆಯ ಕಾರ್ಮಿಕರ ಹಿತ ದೃಷ್ಟಿಯಿಂದ ಆಸ್ಪತ್ರೆ ಅವಶ್ಯಕವಿದೆ. ಈ ಮೂಲಕ ಕಾರ್ಮಿಕ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕಾರ್ಮಿಕರ ಸಂಘದ ವತಿಯಿಂದ ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರ ಸಂಘದ ರಾಜೇಸಾಬ ಕೇಸನೂರು, ರಮೇಶ ಭಂಡಾರಿ, ಶರಣಪ್ಪ ಬಗಲಿ, ಗೌಸ್ ಕಿತ್ತೂರು, ಯಲ್ಲಪ್ಪ ಸುರೇಶ, ಫೈಜಾನ ಮುಲ್ಲಾ,ರವಿ, ಮಂಜುನಾಥ ಮುಂತಾದವರು ಇದ್ದರು.