ಹೋಟೆಲ್​​ನಲ್ಲಿ ಕುಕ್ಕರ್​ ಸ್ಫೋಟ; ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ 9 ಜನರಿಗೆ ಗಾಯ

ಬೆಳಗಾವಿ, ಆ.13: ಹೋಟೆಲ್​​ನಲ್ಲಿ ಕುಕ್ಕರ್​ ಸ್ಫೋಟಗೊಂಡು 9 ಜನರಿಗೆ ಗಾಯವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಯಲ್ಲಮ್ಮ ದೇವಿ ದರ್ಶನಕ್ಕೆ ಬಂದಿದ್ದ ಯಾದಗಿರಿಯ ಐವರು ಹಾಗೂ ಬೆಂಗಳೂರಿನ ನಾಲ್ವರಿಗೆ ಗಾಯವಾಗಿದೆ. ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರಿಗೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದ 7 ಜನರಿಗೆ ಸವದತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸವದತ್ತಿ ಪಟ್ಟಣದ ಹೋಟೆಲ್​ ರೂಂನಲ್ಲಿ ತಂಗಿದ್ದ ಭಕ್ತರು

ಸವದತ್ತಿ ಪಟ್ಟಣದ ಹೋಟೆಲ್​ನಲ್ಲಿ ಒಂದು ಹಾಲ್ ರೀತಿಯ ರೂಮ್ ಪಡೆದು ಎಲ್ಲ ಭಕ್ತರು ಅಲ್ಲೇ ಅಡುಗೆ ಮಾಡುತ್ತಿದ್ದರು. ಹೋಳಿಗೆ ಮಾಡಲು ಕುಕ್ಕರ್​ನಲ್ಲಿ ಬೇಳೆ ಬೇಯಿಸುವಾಗ ಕುಕ್ಕರ್ ಸ್ಫೋಟವಾಗಿದೆ. ಕೂಡಲೇ ಗಾಯಾಳು ಭಕ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕುಕ್ಕರ್ ಸ್ಫೋಟಗೊಂಡು ಹೋಟೆಲ್​ಗೆ ಬೆಂಕಿ ಆವರಿಸಿದ್ದು, ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಘಟನೆಗೆ ಕಾರಣವೇನು?

ಇನ್ನು ಹೋಟೆಲ್​ನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಬಂದ ಸ್ಥಳಕ್ಕೆ ಸವದತ್ತಿ ಪಟ್ಟಣ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಹೋಳಿಗೆ ಮಾಡಲು ಕುಕ್ಕರ್​​ನಲ್ಲಿ ಬೇಳೆ ಹಾಕಿದ್ದ ವೇಳೆ, ಕುಕ್ಕರ್​ಗೆ ನೀರು ಹಾಕುವುದನ್ನ ಮರೆತಿದ್ದರಿಂದ ಬ್ಲಾಸ್ಟ್ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ.