ಚಿಕ್ಕೋಡಿ: ಬೆಳಗಾವಿಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮಧಬಾವಿ ಗ್ರಾಮದ ಅಪ್ಪಾಸಾಬ ಕಾಂಬಳೆ (37) ಕೊಲೆಯಾದವರು.
ಅಪ್ಪಾಸಾಬ ಕಾಂಬಳೆ ದುಡಿಯಲು ನಿತ್ಯ ಪಕ್ಕದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು. ಕಳೆದ ರಾತ್ರಿ 9 ಗಂಟೆಗೆ ಪತ್ನಿಗೆ ಕರೆ ಮಾಡಿದ ಅಪ್ಪಾಸಾಬ ಇಂದು ಕೆಲಸ ಇದೆ ಮನೆ ಬರಲು ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಪ್ಪಾಸಾಬ ಬೀದಿ ಹೆಣವಾಗಿದ್ದಾರೆ.
ಹಂತಕರು ಯಾರೋ ಅಪ್ಪಾಸಾಬನನ್ನು ಕೊಲೆ ಮಾಡಿ ಅನಂತಪುರ ಬಸ್ ನಿಲ್ದಾಣದಲ್ಲಿ ಹಾಕಿ ಹೋಗಿದ್ದಾರೆ. ಮೈಮೇಲೆ ಹೊಡೆದಿರುವ ಗಾಯದ ಗುರುತುಗಳು ಪತ್ತೆಯಾಗಿವೆ. ಬೇರೆಡೆ ಕೊಲೆ ಮಾಡಿ ಶವ ಹಾಕಿ ಹೋಗಿರುವ ಶಂಕೆ ಇದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುರಿಸಿದ್ದಾರೆ.