ಹೊನ್ನಾವರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಲ್ಲಿ ದೇಶಾಭಿಮಾನ ಪ್ರೇರೇಪಿಸಲು ಬಿಜೆಪಿ ಯುವಮೋರ್ಚಾ ಹೊನ್ನಾವರ ಮಂಡಲದಿಂದ ಶುಕ್ರವಾರ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ಸಾಯಂಕಾಲ 4 ಗಂಟೆಗೆ ಪಟ್ಟಣದ ಶರಾವತಿ ವೃತ್ತದಿಂದ ರ‍್ಯಾಲಿ ಪ್ರಾರಂಭವಾಗಲಿದ್ದು ವಿವಿಧ ಕಡೆ ಸಂಚರಿಸಲಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು, ದೇಶಾಭಿಮಾನಿಗಳು ಪಾಲ್ಗೊಳ್ಳುವಂತೆ ಬಿಜೆಪಿ ಯುವಮೋರ್ಚಾ ಹೊನ್ನಾವರ ಮಂಡಲದ ಅಧ್ಯಕ್ಷ ಸಚೀನ್ ಶೇಟ್ ವಿನಂತಿಸಿದ್ದಾರೆ.