ಪ್ಯಾರಿಸ್: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ಧೂರಿಯಾಗಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಆರಂಭಗೊಂಡಿದೆ. ಸೆನ್ ನದಿಯ ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು.
ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಟ್ ಮೂಲಕ ಸ್ಪರ್ಧಿಗಳ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಮೊದಲಿಗೆ ಗ್ರೀಸ್ ತಂಡ ಆಗಮಿಸಿತು. ಬಳಿಕ ಫ್ರೆಂಚ್ ಅಕ್ಷರಮಾಲೆಯ ಪ್ರಕಾರ ದೇಶದ ಸ್ಪರ್ಧಿಗಳು ಆಗಮಿಸಿದರು.