ನವದೆಹಲಿ, ಜೂ.30 : ಉಪೇಂದ್ರ ದ್ವಿವೇದಿ ಅವರು ಭಾರತೀಯ ಸೇನಾ ಸಿಬ್ಬಂದಿಯ 30ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜನರಲ್ ಮನೋಜ್ ಪಾಂಡೆ, PVSM, AVSM, VSM, ADC, ಅವರು ನಾಲ್ಕು ದಶಕಗಳಿಂದ ರಾಜ್ಯಕ್ಕೆ ಸೇವೆ ಸಲ್ಲಿಸಿದ ನಂತರ 30 ರಂದು ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಸ್ಥಾನವನ್ನು ಜನರಲ್ ಉಪೇಂದ್ರ ದ್ವಿವೇದಿಯವರು ಅಲಂಕರಿಸಿದ್ದಾರೆ.
ದ್ವಿವೇದಿಯವರು ಈ ಮುಂಚೆ ಉಪ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಆದೀಗ ಸೇನಾ ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದಾರೆ. ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ದ್ವಿವೇದಿ ಅವರು 2022 – 24ರ ವರೆಗೆ ಉಧಮ್‌ಪುರ ಮೂಲದ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್ ಚೀಫ್ (ಜಿಪಿಸಿ-ಇನ್-ಸಿ) ಆಗಿ ಸೇವೆ ಸಲ್ಲಿಸಿದ್ದರು.
ಅವರ ಸೇವಾ ಅನುಭವವನ್ನು ಆಧರಿಸಿ 30ನೇ ಸೇನಾ ಮುಖ್ಯಸರನ್ನಾಗಿ ನೇಮಕ ಮಾಡಲಾಗಿದೆ. ಇಂದು ತಮ್ಮ ಹೊನ ನೇಮಕಾತಿಯನ್ನು ಸ್ವೀಕರಿಸಿದ ಜನರಲ್ ಉಪೇಂದ್ರ ದ್ವಿವೇದಿ ಅವರಿಗೆ ಭಾರತೀಯ ಸೇನೆಯ ಕಮಾಂಡ್ ಅನ್ನು ಮನೋಪಿ ಪಾಂಡೆ ಅವರು ಹಸ್ತಾಂತರಿಸಿದರು.
ಉಪೇಂದ್ರ ದ್ವಿವೇದಿ ಅವರು ನೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ರಕ್ಷಣಾ ಮತ್ತು ನಿರ್ವಹಣೆಯಲ್ಲಿ M Phil ಮತ್ತು ನ್ಯಾಟೆಜಿಕ್ ಸ್ಟಡೀಸ್ ಮತ್ತು. ಮಿಲಿಟರಿ ಸೈನ್ಸ್ ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.