ಇಡಗುಂಜಿ ಮಹಾಗಣಪತಿಯ ಪದತಲದಲ್ಲಿ60 ಕ್ಕೂ ಹೆಚ್ಚು ಕಲಾವಿದರಿಂದ ಸಂಗೀತ ಸೇವೆ

ಹೊನ್ನಾವರ: ಇಲ್ಲಿನ ಇಡಗುಂಜಿಯ ಮಹಾಗಣಪತಿಯ ಪದತಲದಲ್ಲಿಅಮೋಘವಾದ 60 ಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತಕಲಾವಿದರಿಂದ ಸಂಗೀತ ಸೇವೆ ನಡೆಯಿತು.

ಕಳೆದ 72 ವರ್ಷಗಳಿಂದ ಸಂಗೀತ ಸೇವೆ ಅನೂಚಾನವಾಗಿ ನಡೆದು ಬಂದಿದ್ದುಇದನ್ನು ಗಜಾನನ ಯಾಜಿ, ಗೋಕರ್ಣದ ಕಟ್ಟಿಗೆ ಭಟ್ಟರು, ಕಲಾಬಾಗ ಗೋವಿಂದ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಹಾಗೂ ಕಡತೋಕಾದ ಎಸ್. ಶಂಭು ಭಟ್ಟ ಅವರು ಆರಂಭಿಸಿ ವ್ಯವಸ್ಠಿತವಾಗಿ ನಡೆಸಿಕೊಂಡು ಬಂದಿದ್ದಾರೆ. ಶ್ರೀ ಕ್ಷೇತ್ರದಲ್ಲಿಅಚ್ಚುಕಟ್ಟಾಗಿ – ಭಕ್ತಿಪೂರ್ವಕವಾಗಿ ನಡೆಸಿಕೊಂಡು ಬಂದ ಈ ವಾರ್ಷಿಕ ಸೇವೆ ದೇವಳದ ವಿಶೇಷ ಅಧಿಕಾರಿಗಳು, ಧರ್ಮದರ್ಶಿಗಳು, ಅರ್ಚಕರು ಹಾಗೂ ಸಿಬ್ಬಂದಿಗಳ ಸಂಪೂರ್ಣ ಸಹಕಾರದಿಂದ ಇಷ್ಟು ದೀರ್ಘಕಾಲ ನಿರಂತರ ನಡೆದು ಬರುತ್ತಿರುವುದು ನಮ್ಮ ಭಾಗ್ಯ ಎಂದು ಎಸ್.ಶಂಭು ಭಟ್ ಹೇಳಿದರು

ಸಂಗೀತ ಸೇವೆಯಲ್ಲಿ ಜಿಲ್ಲೆಯ ಹಾಗೂ ಹೊರರಾಜ್ಯದ – ಅಂತರಾಷ್ಟ್ರೀಯ ಕಲಾವಿದರು ಭಾಗವಹಿಸಿ, ಧನ್ಯತೆಯನ್ನು ಪಡೆದಿದ್ದಾರೆ. ಈ ವರ್ಷದ ಸಂಗೀತ ಸೇವೆಯಲ್ಲಿಅಂತರಾಷ್ಟ್ರೀಯ ಕಲಾವಿದರಾದ ಪಂ|| ಪರಮೇಶ್ವರ ಹೆಗಡೆ ರಾಗ ಶುದ್ಧ ಸಾರಂಗವನ್ನು ಪ್ರಸ್ತುತಪಡಿಸಿದರು. ಡಾ|| ಅಶೋಕ ಹುಗ್ಗಣ್ಣವರ ಮುಲ್ತಾನಿ, ಡಾ.ಕೃಷ್ಣಮೂರ್ತಿ ಭಟ್ಟ ಹಿಂಡೋಲ, ಗಜಾನನ ಭಂಡಾರಿ ಶಹನಾಯಿಯಲ್ಲಿ ರಾಗ ಬಿಲಾವತ್, ವಿಶ್ವೇಶ್ವರ ಭಟ್ಟ ಖರ್ವಾ ಬಿಬಾಸ, ಮುಂತಾದ ಅನೇಕ ಕ್ಲಾವಿದರು ಸಂಗೀತವನ್ನು ಪ್ರಸ್ತುತಪಡಿಸಿದರು. ಶಿವಾನಂದ ಭಟ್ಟ ಹಡಿನಬಾಳ ಭೈರವಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು.

ಕಾರ್ಯಕ್ರಮಕ್ಕೆ ನಿನಾದ ರಾಮಣ್ಣ ಸೇವಾರ್ಥವಾಗಿ ಸೌಂಡ್ ಸಿಸ್ಟಮ್ ವ್ಯವಸ್ಥೆ ಕಲ್ಪಿಸಿದರು. ದೇವಳದ ವಿಶ್ವನಾಥ ಹೆಗಡೆ, ಎನ್.ಎಸ್. ಹೆಗಡೆ, ಅರ್ಚಕರು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಪ್ರೋಎಸ್. ಶಂಭು ಭಟ್ಟ, ವಿದ್ವಾನ್ ಶಿವಾನಂದ ಭಟ್ಟ, ವಿದ್ವಾನ್ ವಿಶ್ವೇಶ್ವರ ಭಟ್ಟ, ವಿದ್ವಾನ್‍ಎಸ್.ಜಿ. ಹೆಗಡೆ, ವಿದ್ವಾನ್ ಶ್ರೀಧರ ಹೆಗಡೆ ಕಲ್ಬಾಗ ಹಾಗೂ ಶೇಷಾದ್ರಿ ಅಯ್ಯಂಗಾರ ಹಾಗೂ ಗುರುರಾಜ ಆಡುಕಳ ಅವರು ಅಚ್ಚುಕಟ್ಟಾಗಿ ನಡೆಸಿದರು.