ಹಾವೇರಿ: ಮನೆಯಲ್ಲಿ ಕುಳಿತು ಅಸಿಸ್ಟೆಂಟ್‌ಗೆ ಹೇಳಿ ಸಮೀಕ್ಷೆ ಮಾಡಿಸಿದರೆ ಆಗಲ್ಲ. ಬೆಳೆ ಹಾನಿ ಕುರಿತು ನೈಜ ವರದಿ ನೀಡಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರವಾಹ ಪರಿಸ್ಥಿತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳೆ ಹಾನಿ ಸಮೀಕ್ಷೆ ಬೇಕಾ ಬಿಟ್ಟಿ ಮಾಡಿದ್ದೀರಿ. ಹಾನಗಲ್ ತಾಲೂಕಿನಲ್ಲಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಬೆಳೆಹಾನಿಯಾಗಿದೆ. ಈ ಬಗ್ಗೆ ನಿಮಗೆ ಸರಿಯಾದ ಮಾಹಿತಿಯಿಲ್ಲ. ಅಂದಾಜಿನ ಮೇಲೆ ಬೆಳೆಹಾನಿಯ ಅಂಕಿಅಂಶಗಳನ್ನು ನೀಡಬೇಡಿ. ಏನೋ ಒಂದು ಲೆಕ್ಕ ಕೊಟ್ಟರೆ ಅದರಿಂದ ಉಪಯೋಗವಿಲ್ಲ. ವಿಲೇಜ್ ಅಕೌಂಟೆಂಟ್‌ಗಳು ಎಲ್ಲಾ ಕಡೆ ಇದ್ದಾರೆ. ಅವರಿಂದ ಸರಿಯಾದ ಮಾಹಿತಿ ಪಡೆದು ನಂತರ ವರದಿ ಸಲ್ಲಿಸಿ ಎಂದು ಹಾನಗಲ್ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಡಿಸಿ ಸಂಜಯ್ ಶೆಟ್ಟಣ್ಣವರನ್ನು ಬಿ.ಸಿ ಪಾಟೀಲ್ ತರಾಟೆ ತೆಗೆದುಕೊಂಡರು.