ನಮ್ಮ ಪಕ್ಷದ ಆಂತರಿಕ ವಿಚಾರ ಕಾಂಗ್ರೆಸ್‌ಗೇಕೆ.? – ಬಿ ಸಿ ಪಾಟೀಲ್

ಹಾವೇರಿ: ಕಾಂಗ್ರೆಸ್‌ನವರು ಬೊಮ್ಮಾಯಿಯನ್ನು ಸಿಎಂ ಮಾಡಿಲ್ಲ. ಬಿಜೆಪಿ ವರಿಷ್ಠರೆಲ್ಲ ಸೇರಿ ಮುಖ್ಯಮಂತ್ರಿ ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ಕಾಂಗ್ರೆಸ್‌ಗೇಕೆ ಎಂದು ಹಾವೇರಿಯಲ್ಲಿ ಬಿಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸಿಎಂ ಬದಲಾವಣೆ ವದಂತಿ ವಿಚಾರದ ಕುರಿತು ಮಾತನಾಡಿದ ಅವರು ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಯಾವುದೇ ಹಗರಣ ಮಾಡಿಲ್ಲ. ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸವಿಲ್ಲ, ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮೋತ್ಸವಕ್ಕೆ ಅನಿವಾರ್ಯವಾಗಿ ಡಿಕೆಶಿ ಬಂದಿದ್ರು. ಅಲ್ಲದೇ ರಾಹುಲ್ ಗಾಂಧಿ ಒತ್ತಾಸೆ ಮೇರೆಗೆ ದೃತರಾಷ್ಟ್ರನ ಆಲಿಂಗನದ ರೀತಿ ಆಲಿಂಗನ ಮಾಡಿಕೊಂಡ್ರು. ಕಾಂಗ್ರೆಸ್ ಒಡೆದು ಹೋಳಾಗುತ್ತೆ, ಸಿಡಿದು ಹೋಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.