ಕುಮಟಾ ಮುಂಗಾರು ಪ್ರಾರಂಭಗೊoಡಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಅದೇ ರೀತಿ ಕುಮಟಾ ತಾಲೂಕಿನಲ್ಲಿಯೂ ಸಹ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದು, ಗದ್ದೆಗಳನ್ನು ಹೂಡಿ ಬೀಜ ಬಿತ್ತನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಕುಮಟಾ ತಾಲೂಕಿಗೆ ಸಂಬoದಿಸಿದoತೆ ಈ ಬಾರಿ ಮುಂಗಾರು ಮಳೆ ವಾಡಿಗೆಗಿಂತ ಶೇ 20 ರಷ್ಟು ಜಾಸ್ತಿಯಾಗಿದ್ದು, ಇದು ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.
ಇನ್ನು ಕುಮಟಾದಲ್ಲಿ ಕೃಷಿ ಇಲಾಖೆಯ ವತಿಯಿಂದ ವಿತ್ತನೆ ಬೀಜವನ್ನು ಕಳೆದ 1 ತಿಂಗಳಿನಿoಲೆ ವಿತರಿಸಲು ಪ್ರಾರಂಬಿಸಿದ್ದು, ತಾಲೂಕಿನ ಸುತ್ತ ಮುತ್ತಲ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಬೇಕಾದ ತಳಿಯ ಬಿತ್ತನೆ ಬೀಜವನ್ನು ಸಬ್ಸಿಡಿ ದರದಲ್ಲಿ ಖರೀದಿಸುತ್ತಿದ್ದಾರೆ. ಕುಮಟಾ ಪಟ್ಟಣದ ಕೃಷಿ ಇಲಾಖೆ ಸಮೀಪದ ರೈತ ಸಂಪರ್ಕ ಕೇಂದ್ರ ಸೇರಿದಂತೆ ಇನ್ನೂ 4 ಕಡೆಗಳಲ್ಲಿ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗುತ್ತಿದೆ.
ಈ ಸಂಬoದ ಕುಮಟಾದ ಸಹಾಯಕ ಕೃಷಿ ನಿರ್ದೇಶಕರಾದ ವೆಂಕಟೇಶ ಮೂರ್ತಿ ಅವರು ಮಾತನಾಡಿ, ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಈ ವರ್ಷದಲ್ಲಿ ಉತ್ತಮ ಮಳೆಯ ವಾತವಾರಣ ಇದೇ ಎಂದು ಈಗಾಗಲೇ ಮೆಟ್ರಾಲಜಿ ಇಲಾಖೆ ತಿಳಿಸಿದೆ. ಕುಮಟಾ ತಾಲುಕಿಗೆ ಸಂಬoಧಿಸಿದoತೆ 439 ಮಿ.ಮೀ ಮಳೆಯು ವಾಡಿಕೆಯಾಗಿದ್ದು, ಆದರೆ ಈ ವರ್ಷ 525 ಮಿ.ಮೀ ನಷ್ಟು ಮಳೆಯಾಗಿದೆ. ಅದೇ ರೀತಿ ಮಳೆಯು ಪ್ರಾರಂಭವಾದ ನಂತರ ಕೃಷಿ ಇಲಾಖೆಯಿಂದ ಮಾಡುವ ಪ್ರಮುಖ ಕಾರ್ಯ ಬಿತ್ತನೇ ಬೀಜ ವಿತರಣಾ ಕಾರ್ಯಕ್ರಮ ಎನ್ನುತ್ತಾ ಸಂಕ್ಷಿಪ್ತ ವಿವರಣೆ ನೀಡಿದರು.
ಸಾಕಷ್ಟು ರೈತರಿಗೆ ಬಿತ್ತನೆ ಬೀಜದ ದರದ ಕುರಿತಾಗಿ ಗೊಂದಲವಿದ್ದು, ಸಾಮಾನ್ಯ ವರ್ಗದವರಿಗೆ 200 ರೂ ಹಾಗೂ ಪರಿಶಿಷ್ಠ ವರ್ಗದವರಿಗೆ 300 ರೂ ಸಬ್ಸಿಡಿಯಂತೆ ವಿತರಿಸುತ್ತೆವೆ ಎನ್ನುತ್ತಾ ವಿವಿದ ತಳಿಯ ಬಿತ್ತನೆ ಬೀಜದ ದರದ ಕುರಿತು ಮಾಹಿತಿ ನೀಡಿದರು. ಎಲ್ಲಾ ರೈತರು ಒಂದೇ ತಳಿಗೆ ಸೀಮಿತವಾಗಿರದೆ ಸರಕಾರವು ನೀಡಿರುವ ಅನೇಕ ಹೊಸ ಹೊಸ ಉತ್ತಮ ತಳಿಯ ಬಿತ್ತನೆ ಬೀಜವನ್ನು ಬಳಸಿ, ಅದರ ಫಲವನ್ನು ಪರಿಕ್ಷಿಸಬೇಕು ಎಂದು ತಿಳಿಸಿದರು.