ವ್ಯಕ್ತಿಯೊರ್ವನಿಗೆ ಪಿಎಸ್​​ಐ ನಿಂದ ಕಿರುಕುಳ ಆರೋಪ; ಮನನೊಂದು ಠಾಣೆ ಮುಂದೆಯೇ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಉತ್ತರ ಕನ್ನಡ, ಜೂ.14: ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಹನುಮಾನ ಗಲ್ಲಿಯ ನಿವಾಸಿ ಆಗಿರುವ ಭಾಸ್ಕರ್​ ಬೋಂಡೆಲ್ಕರ್ ಮತ್ತು ರಾಮನಗರ ಪಿಎಸ್​ಐ ಬಸವರಾಜ್ ನಡುವೆ ಕಳೆದ ಐದಾರು ತಿಂಗಳಿನಿಂದ ವೈಮನಸ್ಸಿತ್ತು. ಆದ್ರೆ, ಕೆಲ ದಿನಗಳಿಂದ ಪಿಎಸ್​ಐನಿಂದ ದೂರ ಇದ್ದ ಭಾಸ್ಕರ್​. ತನ್ನ ಮಾವ ಗಣಪತಿ ಎಂಬುವವರು ಪ್ಲಾಟ ವಿಚಾರದಲ್ಲಿ ನೋಟಿಸ್ ಕೊಟ್ಟಿದಕ್ಕೆ, ನಿನ್ನೆ(ಜೂ.13) ರಾತ್ರಿ ರಾಮನಗರ ಪೊಲೀಸ್ ಠಾಣೆಗೆ ಬಂದಿದ್ದ. ಈ ಸಂದರ್ಭದಲ್ಲಿ ಪಿಎಸ್​ಐ ಬಸವರಾಜ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪಿಎಸ್ಐ ಮತ್ತು ಠಾಣೆಯ ಇನ್ನಿತರ ಸಿಬ್ಬಂಧಿಗಳು ಸೇರಿ ಈತನ ಬಳಿಯ ಮೊಬೈಲ್ ಕಸಿದುಕೊಂಡು ದೌರ್ಜನ್ಯ ಮಾಡಿದ್ದಾರೆಂದು ಭಾಸ್ಕರ್​ ಆರೋಪಿಸಿದ್ದಾರೆ.

ಮೈ ಮೆಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡ ಸ್ಪಂದಿಸಿಲ್ಲ. ಇನ್ನು ತನ್ನ ಸಮಸ್ಯೆಗೆ ನ್ಯಾಯ ಕೊಡಬೇಕಿದ್ದ ಪೊಲೀಸರೆ ತನ್ನ ಮೇಲೆ ದೌರ್ಜನ್ಯ ಮಾಡುತ್ತಿರುವುದಕ್ಕೆ ನೊಂದ ಭಾಸ್ಕರ್, ಮೈ ಮೆಲೆ ಪೆಟ್ರೊಲ್ ಸುರಿದುಕೊಂಡು ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆಗೆ ಯತ್ನಸಿದ್ದ. ಈ ಸಂದರ್ಭದಲ್ಲಿ ಕೂಡಲೆ ಎಚ್ಚೆತ್ತ ಪೊಲೀಸ್ರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿಸಿದ್ದಾನೆ.

ಇನ್ನು ಭಾಸ್ಕರ್​ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಎಎಸ್​ಪಿ ಜಯಕುಮಾರ್​, ‘ಭಾಸ್ಕರ್ ನಿನ್ನೆ ರಾತ್ರಿ ಮಧ್ಯಪಾನ ಮಾಡಿ ಠಾಣೆಗೆ ಬಂದು ತನ್ನ ಮಾವನಿಗೆ ಯಾಕೆ ನೋಟಿಸ್ ಕೊಟ್ಟಿದ್ದಿರಾ ಎಂದು ಜೋರಾಗಿ ಪ್ರಶ್ನಿಸುತ್ತಾನೆ. ನೋಟಿಸ್ ಬಗ್ಗೆ ಸರಿಯಾದ ಮಾಹಿತಿ ಕೊಟ್ರು ಸಹಿತ, ಪೊಲೀಸ್ ಠಾಣೆಯಲ್ಲಿ ದುರ್ವತನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತ ಅತಿಯಾಗಿ ಮಧ್ಯಪಾನ ಮಾಡಿರುವುದು ಗೊತ್ತಾಗಿ ಆತನ ಬೈಕ್ ಕೀಯನ್ನು ವಶಕ್ಕೆ ಪಡಿದಿದ್ದಾರೆ. ನೀನು ಮಧ್ಯಪಾನ ಮಾಡಿದಿಯಾ ಬೇರೆ ಯಾರಿಗಾದರೂ ಕರೆಸಿ ಗಾಡಿ ತೊಗೊಂಡ ಹೋಗು ಎಂದು ಹೇಳಿದಕ್ಕೆ ಕೋಪಗೊಂಡ ಭಾಸ್ಕರ್​ ಮೈ ಮೇಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ಸಿಬ್ಬಂಧಿಗಳು ಆತನನ್ನು ರಕ್ಷಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಯಕುಮಾರ ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಪದ ಕೈಯಲ್ಲಿ ಬುದ್ದಿ ಕೊಟ್ಟ ಭಾಸ್ಕರ್​ ತನ್ನ ಜೀವ ಕಳೆದುಕೊಳ್ಳಲು ಮುಂದಾಗಿದ್ದ. ಸದ್ಯ ಪೊಲೀಸ್ರ ಮುಂಜಾಗೃತೆಯಿಂದ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ದೇಹ ಸುಟ್ಟ ಹಿನ್ನೆಲೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.