ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಮಾರಕದಾಳಿಗೆ ಓಮನ್ ತತ್ತರಿಸಿತು. 13.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಓಮನ್ 47 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿತು. ಕೇವಲ 19 ಬಾಲ್ಗೆ ಟಾರ್ಗೆಟ್ ರೀಚ್ ಆಯಿತು.
ಮಳೆಯ ಕಾರಣದಿಂದ ಒಂದು ಪಂದ್ಯ ರದ್ದಾಗಿ ಇಂಗ್ಲೆಂಡ್ ಭಾರೀ ನಷ್ಟ ಅನುಭವಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತು. ಈ ಮೂಲಕ ಸೂಪರ್ 8 ಕನಸನ್ನು ಮರೆಯುವ ಸ್ಥಿತಿ ಬಂದೊದಗಿತ್ತು. ಆದರೆ, ಜೂನ್ 13ರಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಪುಟಿದೆದ್ದಿದೆ. ಓಮನ್ ನೀಡಿದ 47 ರನ್ಗಳ ಟಾರ್ಗೆಟ್ನ ಕೇವಲ 19 ಬಾಲ್ಗೆ ಚೇಸ್ ಮಾಡಿ ದಾಖಲೆ ಬರೆದಿದೆ. ಈ ಮೂಲಕ ರನ್ರೇಟ್ ಹೆಚ್ಚಿಸಿಕೊಂಡಿದೆ. ಸದ್ಯ ಇಂಗ್ಲೆಂಡ್ +3.081 ರನ್ರೇಟ್ನೊಂದಿಗೆ ಸೂಪರ್ 8ಗೆ ಏರುವ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಮಾರಕದಾಳಿಗೆ ಓಮನ್ ತತ್ತರಿಸಿತು. ಆದಿಲ್ ರಶಿದ್ ಅವರು ನಾಲ್ಕು ವಿಕೆಟ್ ಕಿತ್ತರೆ ಮಾರ್ಕ್ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರು. 13.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಓಮನ್ 47 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿತು. ಕೇವಲ 19 ಬಾಲ್ಗೆ ಟಾರ್ಗೆಟ್ ರೀಚ್ ಆಯಿತು.
ಗ್ರೂಪ್ Bನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸ್ಟ್ರಾಂಗ್ ತಂಡಗಳು ಎನಿಸಿಕೊಂಡಿದ್ದವು. ಆದರೆ, ಸ್ಕಾಟ್ಲೆಂಡ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಇದು ಸ್ಕಾಟ್ಲೆಂಡ್ಗೆ ವರದಾನ ಆಗಿತ್ತು.
ಅಂಕಪಟ್ಟಿಯಲ್ಲಿ ಸ್ಕಾಟ್ಲೆಂಡ್ 5 (+2.164) ಅಂಕ ಪಡೆದು ಎರಡನೇ ಸ್ಥಾನದಲ್ಲಿ ಇದ್ದರೆ, ಇಂಗ್ಲೆಂಡ್ 3 (+3.081) ಅಂಕ ಪಡೆದು ಮೂರನೇ ಸ್ಥಾನದಲ್ಲಿ ಇದೆ. ಸ್ಕಾಟ್ಲೆಂಡ್ ಮುಂದಿನ ಪಂದ್ಯ ಸೋತು, ಇಂಗ್ಲೆಂಡ್ ಮುಂದಿನ ಪಂದ್ಯ ಗೆದ್ದರೆ ಇಂಗ್ಲೆಂಡ್ ತಂಡ ಸೂಪರ್ಗೆ ಅರ್ಹತೆ ಪಡೆಯಲಿದೆ. ಈ ಕಾರಣದಿಂದಲೇ ಇಂಗ್ಲೆಂಡ್ಗೆ ಗುರುವಾರದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿತ್ತು. ಈಗ ಹಾಗೆಯೇ ಆಗಿದೆ.