ಕುವೈತ್ ಕಟ್ಟಡದಲ್ಲಿ ಅಗ್ನಿ ಅವಘಡ: ಕೊಚ್ಚಿಗೆ ಬಂದಿಳಿಯಲು 45 ಭಾರತೀಯರ ಶವಗಳನ್ನು ಹೊತ್ತ ವಿಮಾನ

ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ 33 ಮಂದಿ ಕೇರಳದವರು, ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಬೆಂಕಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡಲು ಹಾಗೂ ಮೃತದೇಹವನ್ನು ತರಲು ಕುವೈತ್​ಗೆ ಹೋಗಿದ್ದರು.

ಕುವೈತ್​ನ ಮುಂಗಾಫ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದ 45 ಭಾರತೀಯರ ಶವಗಳೊಂದಿಗೆ ವಾಯು ಸೇನಾ ವಿಮಾನ ಕೊಚ್ಚಿಗೆ ಬಂದಿಳಿದಿದೆ. ಸಿ-130ಜೆ ವಿಮಾನವು ಜೂನ್​ 13ರಂದು ಕುವೈತ್​ಗೆ ಹೊರಟಿತ್ತು. ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗ ಮೃತರ ಸಂಖ್ಯೆ 46ಕ್ಕೆ ಏರಿಕೆ,  ಇದೀಗ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿರುವ ವಿಮಾನ ಬಳಿಕ ದೆಹಲಿಗೆ ತೆರಳಲಿದೆ.

ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ 33 ಮಂದಿ ಕೇರಳದವರು, ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಬೆಂಕಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡಲು ಹಾಗೂ ಮೃತದೇಹಗಳನ್ನು ತರಲು ಕುವೈತ್​ಗೆ ಹೋಗಿದ್ದರು.

ಈ ಮುಂಗಾಫ್​ ಕಟ್ಟದಲ್ಲಿ 160 ಮಂದಿ ವಾಸವಾಗಿದ್ದರು, ಅಲ್ಲಿದ್ದವರಲ್ಲಿ ಬಹುತೇಕರು ವಲಸೆ ಕಾರ್ಮಿಕರು. ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿಮಾನ ನಿಲ್ದಾಣದಲ್ಲಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇಡೀ ಕಟ್ಟಡವನ್ನು ವ್ಯಾಪಿಸಿ ದುರಂತ ಸಂಭವಿಸಿದೆ.

ಅಲ್ಲದೆ ಕೀರ್ತಿ ವರ್ಧನ್ ಸಿಂಗ್ ಅವರು ಉಪ ಪ್ರಧಾನಿ ಶೇಖ್ ಫಹಾದ್ ಯೂಸುಫ್ ಸೌದ್ ಎಐ-ಸಬಾಹ್ ಅವರ ಜತೆಯೂ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ, ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಲು ಮತ್ತು ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸಂಪೂರ್ಣ ಬೆಂಬಲ ಮತ್ತು ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ.

ಮಾತ್ರವಲ್ಲ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಅಲಿ ಎಐ-ಯಾಹ್ಯಾ ಮತ್ತು ಆರೋಗ್ಯ ಸಚಿವ ಅಹ್ಮದ್ ಅಬ್ದೆಲ್ವಹಾಬ್ ಅಹ್ಮದ್ ಅಲ್-ಅವಾಡಿ ಅವರನ್ನು ಭೇಟಿಯಾಗಿ ಕೀರ್ತಿ ವರ್ಧನ್ ಸಿಂಗ್ ಚರ್ಚೆ ನಡೆಸಿದರು. ಸಂತ್ರಸ್ತರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರಿಗಾಗಿ 24×7 ಮೀಸಲಾದ ಸಹಾಯವಾಣಿ +965-65505246 ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿದ್ದವರು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.

ಕೇರಳದವರ ಜೊತೆಗೆ ತಮಿಳುನಾಡಿನ 7 ಜನ ಆಂಧ್ರ ಪ್ರದೇಶದ ಮೂವರು ಹಾಗೂ ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರ್ಯಾಣ ಪಂಜಾಬ್‌ನ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಈ ದುರಂತದಲ್ಲಿ ಮಡಿದಿದ್ದಾರೆ. ಇತ್ತ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ನಿನ್ನೆಯೇ ಕುವೈತ್‌ಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ಗಾಯಾಳುಗಳ ಕ್ಷೇಮ ವಿಚಾರಿಸಿದ್ದರು.