ಹೊನ್ನಾವರ : ಅಧಿಕ ರಕ್ತದೊತ್ತಡ ದಿನದ ಪ್ರಯುಕ್ತ ಹೊನ್ನಾವರದ ಬಸ್ ನಿಲ್ದಾಣ ಹಾಗೂ ಜನನಿಬೀಡ ಪ್ರದೇಶಗಳಲ್ಲಿ ಸೆಂಟ್ ಇಗ್ನೆಷಿಯಸ್ ನರ್ಸಿಂಗ್ ಕಾಲೇಜಿನ ವತಿಯಿಂದ ಉಚಿತ ಬಿಪಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು..
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ಸೆಂಟ್ ಇಗ್ನೇಷಿಯಸ್ ನರ್ಸಿಂಗ್ ಕಾಲೇಜಿನ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಹಾಗೂ ಜನನಿಬೀಡ ಪ್ರದೇಶಗಳಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಬಿಪಿಯನ್ನು ತಪಾಸಣೆ ನಡೆಸಿದ್ರು. ಬಿಪಿ ತಪಾಸಣೆ ವೇಳೆ ಏನಾದ್ರೂ ಏರು ಪೇರು ಕಂಡ ಬಂದಲ್ಲಿ ಅದಕ್ಕೆ ಸೂಕ್ತ ಮಾತ್ರೆಗಳು ಹಾಗೂ ಸೂಕ್ತ ವೈದ್ಯರನ್ನು ಸಂಪರ್ಕಿಸುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು..
ಯುವ ಜನರಲ್ಲಿ ಅಧಿಕ ರಕ್ತದೊತ್ತಡದ ಕೆಲವು ಪ್ರಮುಖ ಕಾರಣಗಳು ಹೆಚ್ಚಿನ ಒತ್ತಡದ ಮಟ್ಟಗಳು, ಬೊಜ್ಜು, ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ. ದೀರ್ಘಕಾಲದ ಅಧಿಕ ರಕ್ತದೊತ್ತಡವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಪಾರ್ಶ್ವವಾಯು, ಹೃದಯಾಘಾತ, ಇತ್ಯಾದಿ ಸೇರಿದಂತೆ ವಿವಿಧ ವೈದ್ಯಕೀಯ ಪರಿಸ್ಥಿತಿಗಳ ಹೆಚ್ಚಿನ ಅಪಾಯವನ್ನು ವ್ಯಕ್ತಿಯನ್ನು ಇರಿಸುತ್ತದೆ. ಆದ್ರಿಂದ ಜನರಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನೂ ಈ ವೇಳೆ ಮಾತನಾಡಿದ ಸೆಂಟ್ ಇಗ್ನೇಷಿಯಸ್ ನರ್ಸಿಂಗ್ ಕಾಲೇಜಿನ ಪ್ರಾದ್ಯಾಪಕ ರಾಕೇಶ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ನಾವು ನಮ್ಮ ಸಂಸ್ಥೆಯ ವತಯಿಂದ ಜನನಿಬೀಡ ಪ್ರದೇಶಗಳಲ್ಲಿ ಉಚಿತ ಬಿಪಿ ತಪಾಸಣೆ ಮಾಡ್ತಿದ್ದೇವೆ. ಇಂದು ಬಸ್ ನಿಲ್ದಾಣದಲ್ಲಿ ಮಾಡುತ್ತಿದ್ದೇವೆ ನಾಳೇ ರೈಲ್ವೆ ನಿಲ್ದಾಣ ಹೀಗೆ ಜನಸೇರುವ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಧಿಕ ರಕ್ತದೊತ್ತಡದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ರು..
ಇನ್ನೂ ಈ ಉಚಿತ ಬಿಪಿ ತಪಾಸಣಾ ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಜನರು ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು..