ಹೊನ್ನಾವರ : ತಾಲೂಕಿನ ಗೇರುಸೊಪ್ಪದ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆ.ಪಿ.ಸಿ ಮನರಂಜನಾ ಸಂಘದಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ಆಚರಿಸಲಾಯ್ತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಬಿ.ಕೆ ವಿಶ್ವೇಶ್ವರ ಹಳೆಮನೆ ಪ್ರಜಾಪೀತಾ ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯ ಗೇರುಸೊಪ್ಪ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ವೇಳೆ ಬಸವೇಶ್ವರರ ತತ್ವ ಸಿದ್ದಾಂತಗಳ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾದ ಪ್ರಕಾಶ್ ಕುಮಾರ ಎಸ್, ಕಾರ್ಯ ನಿರ್ವಾಹಕ ಅಭಿಯಂತರಾದ ಗಿರೀಶ ಎಸ್.ಎಮ್, ಅಧೀಕ್ಷಕರಾದ ಶ್ರೀ ರಾಯಪ್ಪ ಸಿಂಧೋಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರಕಾಶ್ ಹೆಚ್.ಪಿ, ಹನುಮಂತಪ್ಪ ಹೆಚ್.ಆರ್, ಶಿವಾನಂದ ಯಾಜಿ, ಶಿಲ್ಪಾ ಎಸ್, ಎಸ್. ಮೋತಿ ಹಾಗೂ ಟಿ.ಎನ್ ನಿರಂಜನ್ ಮೂರ್ತಿ ಹಾಗೂ ಕೆಪಿಸಿ ಸಿಬ್ಬಂದಿಯವರು ಉಪಸ್ಥಿತರಿದ್ರು..



