ಮಾರ್ಚ್‌ 3ರಂದು ಪುರಾಣ ಪ್ರಸಿದ್ದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ

ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ದ ಶಕ್ತಿ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಮಾರ್ಚ 3 ರಂದು ವಿಜೃಂಭಣೆಯಿಂದ ನಡೆಯಲಿದೆ‌.

ಶೋಭನ ಸಂವತ್ಸರದ ಮಾಘ ಕೃಷ್ಣ ಪಂಚಮಿ 29-2-2024ರಿಂದ ಮಾಘ ಕೃಷ್ಣ ಅಷ್ಟಮಿ ದಿನಾಂಕ 3-3-2024ರವರೆಗೆ ರಥೋತ್ಸವಾಂಗ ಧಾರ್ಮಿಕ ಕಾರ್ಯಕ್ರಮಗಳು ನೆರವೆರಲಿದ. ದಿನಾಂಕ 2-3-2024ರಂದು ಪುಷ್ಪರಥೋತ್ಸವ ಹಾಗೂ ದಿನಾಂಕ 3-3-2024 ರಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ.

ಜಾತ್ರಾ ಪ್ರಯುಕ್ತ ಪೆರ್ಡೂರು ಮೇಳದವರಿಂದ ಸೂಪರ್ ಹಿಟ್ ಪ್ರಸಂಗ ಅದ್ದೂರಿ ರಂಗಸಜ್ಜಿಕೆಯಲ್ಲಿ ‘ಗಂಗೆ-ತುಂಗೆ-ಕಾವೇರಿ’ ಎಂಬ ಯಕ್ಷಗಾನ ದಿನಾಂಕ 3-4-2024ರಂದು ರಾತ್ರಿ 9:30ಕ್ಕೆ ಕೊಳಗದ್ದೆ ರಥಬೀದಿಯಲ್ಲಿ ಪ್ರದರ್ಶನಗೊಳ್ಳಲಿದೆ. ಯಕ್ಷಗಾನದ ರಸದೌತಣವನ್ನು ಉಂಡು ಅದ್ಭುತ ಕಲೆಯನ್ನು ಉಳಿಸಿ-ಬೆಳೆಸಿ…

ಈಗಾಗಲೇ ದೇವಾಲಯದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಪ್ರತಿ ಸಂಕಷ್ಟಿಗೆ ಅನ್ನಸಂತರ್ಪಣೆ ನಡೆಯುತ್ತಿದ್ದು ಜಾತ್ರೆಯ ದಿನದಂದು ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ದೇವರ ಮುಡಿಗಂದ ಪ್ರಸಾದ ಸ್ವಿಕರಿಸಿ ಶ್ರೀ ಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ