ವಿದ್ಯುತ್‌ ಸ್ಪರ್ಶದಿಂದ ಕಾಡೆಮ್ಮೆ ಸಾವು

ಸಿದ್ದಾಪುರ : ವಿದ್ಯುತ್ ಸ್ಪರ್ಶದಿಂದ ಕಾಡೆಮ್ಮೆ ಒಂದು ತೋಟವೊಂದರಲ್ಲಿ ಮೃತ ಪಟ್ಟಿರುವ ಘಟನೆ ಕ್ಯಾದಗಿ ವಲಯದ ಬಿಳಗಿ ಶಾಖೆಯ ಚಪ್ಪರಮನೆ ಗ್ರಾಮದ ಮಾಲ್ಲಿ ಸರ್ವೆ ನಂ.33ರಲ್ಲಿ ನಡೆದಿದೆ. ಕಾಡೆಮ್ಮೆ ಸಾವಿಗೆ ಕಾರಣರಾದ ಆರೋಪಿ ಶ್ರೀಧರ ಗಣಪತಿ ಹೆಗಡೆ ಗದ್ದೆಮನೆ ಅವರನ್ನ ಬಂಧಿಸಲಾಗಿದೆ.

ಕಾಡು ಪ್ರಾಣಿಗಳು ತೋಟದೊಳಗೆ ಪ್ರವೇಶ ಮಾಡುವುದನ್ನ ತಡೆಯಲು ತೋಟದ ಮಾಲೀಕ ಶ್ರೀಧರ ಹೆಗಡೆ ತಮ್ಮ ತೋಟದ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದರು ಎನ್ನಲಾಗಿದೆ.ಈ ವೇಳೆ ಕಾಡೆಮ್ಮೆ ತೋಟದ ಬಳಿ ಬಂದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಕಾಡೆಮ್ಮೆ ಸಾವನ್ನಪ್ಪಿರುವ ಸುದ್ದಿ ತಿಳಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಅಜ್ಜಯ್ಯ ಜಿ.ಆರ್. (IFS)ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ Ge ಕೆ.ಜಿ.ಪ್ರಕಾಶ ಮತ್ತು ವಲಯ ಅರಣ್ಯಾಧಿಕಾರಿಗಳಾದ ಗಿರೀಶ ನಾಯ್ಕ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ರೀಧರ ಗಣಪತಿ ಹೆಗಡೆ ಎಂಬುವವರು ಐಬೆಕ್ಸ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಹಾಕಿರುವುದು ಪತ್ತೆಯಾಗಿದ್ದು, ತಂತಿಯ ಸ್ಪರ್ಶದಿಂದ ಕಾಡೆಮ್ಮೆ ಸಾವನ್ನಪ್ಪಿದೆ ಎನ್ನಲಾಗಿದೆ.

ಶ್ರೀಧರ ಗಣಪತಿ ಹೆಗಡೆ ಗದ್ದೆಮನೆ ಇವರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972ರಡಿಯಲ್ಲಿ ಪ್ರಕರಣ‌ ದಾಖಲಿಸಿ‌ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತನಿಖೆಯಲ್ಲಿ ಸಿದ್ದಾಪುರದ ಪಶು ವೈದ್ಯಾಧಿಕಾರಿ ವಿವೇಕ ಹೆಗಡೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಶಾಂತ ಎಚ್.ನಾಯ್ಕ ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ಪಾಲಕರಾದ ನಿತಿನ್ ಪಟಗಾರ, ಮತ್ತು ವೈ. ಎಮ್. ಚಿನ್ಮಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.