ಕೊನೆಗೂ ಸಂಜೆ 4.30ಕ್ಕೆ ಬಂದು ಮತದಾನ ಮಾಡಿದ ಅನಂತಕುಮಾರ್​ ಹೆಗಡೆ : ಹೇಳಿದ್ದೇನು..?

ಶಿರಸಿ, ಮೇ 07: ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಿದಕ್ಕೆ ಸೈಲೆಂಟ್​ ಆಗಿದ್ದ ಅನಂತ್​ ಕುಮಾರ್​ ಹೆಗಡೆ ಕೊನೆಗೂ ಮತದಾನ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಹೆಚ್​ಬಿ ಕಾಲೋನಿಯ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಮತಗಟ್ಟೆಗೆ ಪತ್ನಿ ಶ್ರೀರೂಪ ಜೊತೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಟಿಕೆಟ್ ಕೈ ತಪ್ಪಿದಕ್ಕೆ ಬಹಿರಂಗವಾಗಿ ಕಾಣಿಸಿಕೊಳ್ಳದೆ ಯಾವುದೇ ಪ್ರಚಾರ ಮಾಡಿರಲಿಲ್ಲ.

ಅನಂತ್​ ಕುಮಾರ್​ ಹೆಗಡೆ ಪ್ರತಿ ಬಾರಿ ಬೆಳಿಗ್ಗೆ 8 ಗಂಟೆಗೆ ಮತದಾನ ಮಾಡುತ್ತಿದ್ದರು. ಆದರೆ ಇದೆ ಮೊದಲ ಬಾರಿಗೆ ಸಂಜೆ 4:30 ಮತದಾನಕ್ಕೆ ಆಗಮಿಸಿದ್ದರು. ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನಂತ್​ ಕುಮಾರ್​ ಹೆಗಡೆ, ಮತದಾನ ಮಾಡುವುದು ದೇಶದ ಜನರ ಕರ್ತವ್ಯ.​ ಹಾಗಾಗಿ ನಾನು ಒಬ್ಬ ದೇಶದ ಪ್ರಜೆಯಾಗಿ ಮತ ಚಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಟಿಕೆಟ್​ ಕೈ ತಪ್ಪಿದ ಬಳಿಕ ಸೈಲೆಂಟ್​ ಆದ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂದಾಗ ಯಾಕೆ ಕಾಣ್ಸಿಲ್ಲ ಎಂಬ ಪ್ರಶ್ನೆಗೆ ಮತ್ತು ಇತರೆ ಯಾವುದೇ ರಾಜಕೀಯ ಪ್ರಶ್ನೆಗೆ ಉತ್ತರಿಸದೆ ಧನ್ಯವಾದ ಹೇಳಿದ್ದಾರೆ.