25 ವರ್ಷದ ಪಾಕಿಸ್ತಾನದ ಉದಯೋನ್ಮುಖ ನಟಿಯಾಗಿರುವ ನವಾಲ್ ಸಯೀದ್ ಅವರಿಗೆ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಅವರಿಂದ ವಿಚ್ಛೇದನ ಪಡೆದು ಸನಾ ಜಾವೇದ್(Sana Javed) ಅವರನ್ನು ವಿವಾಹವಾಗಿದ್ದ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್(Shoaib Malik) ವಿರುದ್ಧ ಮತ್ತೊಂದು ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮಲಿಕ್ ಅವರು ನಟಿ ನವಾಲ್ ಸಯೀದ್(Nawal Saeed) ಜತೆ ಫ್ಲರ್ಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಚಾಟ್ ಶೋ ‘ಲೈಫ್ ಗ್ರೀನ್ ಹೇ’ ಕಾರ್ಯಕ್ರಮವೊಂದರಲ್ಲಿ ಪಾಕ್ ನಟಿ ನವಾಲ್ ಸಯೀದ್ ನೀಡಿದ ಒಂದು ಶಾಕಿಂಗ್ ಹೇಳಿಕೆ ಬಳಿಕ ಈ ಅನುಮಾನ ಹುಟ್ಟಿಕೊಂಡಿದೆ. ಸಂದರ್ಶನದಲ್ಲಿ ಮಾತನಾಡಿದ ಈ ನಟಿ, ಮದುವೆ ಆದ ಪಾಕಿಸ್ತಾನ ಕ್ರಿಕೆಟರ್ಗಳು ನನಗೆ ಮೆಸೇಜ್ ಮಾಡುತ್ತಾರೆ ಎಂದು ಹೇಳಿದರು. ಅವರ ಈ ಹೇಳಿಕೆಯನ್ನು ಪರೋಕ್ಷವಾಗಿ ನೆಟ್ಟಿಗರು ಶೋಯಿಬ್ ಮಲಿಕ್ಗೆ ಹೋಲಿಕೆ ಮಾಡಿದ್ದಾರೆ.
ನವಾಲ್ ಅವರು ನನಗೆ ಮದುವೆ ಆದವರು, ಈಗಲೇ ಪ್ರೀತಿಯಲ್ಲಿ ಇರೋ ಕ್ರಿಕೆಟರ್ಗಳ ಫ್ಲರ್ಟ್ ಮೆಸೇಜ್ಗಳು ಬರುತ್ತವೆ ಎಂದು ಹೇಳಿದ ತಕ್ಷಣ ಸಂದರ್ಶನಕ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಶೋಯಿಬ್ ಮಲ್ಲಿಕ್ ಕೂಡ ಇದ್ದಾರ ಎಂದು ಕೇಳಿದ್ದಾರೆ. ಈ ವೇಳೆ ನವಾಲ್ ನಕ್ಕು ಸುಮ್ಮನಾಗಿದ್ದಾರೆ. ನೆಟ್ಟಿಗರು ಈ ನಗುವಿನ ಅರ್ಥವನ್ನು ಬೇರೆಯೇ ರೀತಿಯಲ್ಲಿ ಕಲಪಿಸಿದ್ದು ಮೂರನೇ ಮದುವೆಯದರೂ ಕೂಡ ಮಲಿಕ್ ಪೋಲಿ ಬುದ್ಧಿ ಬಿಟ್ಟಿಲ್ಲ ಎಂದು ಹೇಳಲಾರಂಭಿಸಿದ್ದಾರೆ.
ಮಲಿಕ್ ಅವರು ನಿಜವಾಗಿಯೂ ನವಾಲ್ ಅವರಿಗೆ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾರಾ ಎನ್ನುವ ವಿಚಾರ ತಿಳಿದಿಲ್ಲ. ಇತ್ತೀಚೆಗಷ್ಟೇ ಶೋಯೆಬ್ ತನ್ನ ಮೂರನೇ ಪತ್ನಿ ಸನಾ ಜಾವೇದ್ ಅವರ 31 ನೇ ಹುಟ್ಟುಹಬ್ಬವನ್ನು ಜತೆಯಾಗಿ ಆಚರಿಸಿದ್ದರು. ಈ ಫೋಟೊವನ್ನು ಕೂಡ ಮಲಿಕ್ ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದರು.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್ನ ತಾಜ್ ಕೃಷ್ಣಾ ಹೋಟೆಲ್ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ಅವರು ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್ಗೆ ವಿದಾಯ ಹೇಳಿದ್ದರು. ವಿಚ್ಚೇದನ ಬಳಿಕ ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ‘ಪ್ರತಿಬಿಂಬ’ ಎಂದು ಬರೆದುಕೊಂಡಿದ್ದರು.