Video : IPL ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ತಪ್ಪಿದ ಭಾರಿ ಅನಾಹುತ

ಐಪಿಎಲ್​ನ(IPL 2024) ರಾಜಸ್ಥಾನ್​ ರಾಯಲ್ಸ್(Rajasthan Royals)​ ಮತ್ತು ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ನಡುವಣ ಪಂದ್ಯ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಸ್ಪೈಡರ್ ಕ್ಯಾಮೆರಾದ(Spidercam ) ಕೇಬಲ್​ ಏಕಾಏಕಿ ತುಂಡಾಗಿ ಪಿಚ್​ ಮೇಲೆ ಬಿದ್ದ ಘಟನೆ ನಡೆದಿದೆ.

ಜೈಪುರ, ಮಾರ್ಚ್‌ 24 : ಕ್ರಿಕೆಟ್ ಪಂದ್ಯದ ವೇಳೆ ಸಾಮಾನ್ಯವಾಗಿ ಮಳೆ, ಮಂದಬೆಳಕು, ಔಟ್‌ಫೀಲ್ಡ್ ಒದ್ದೆ, ಹೊನಲು ಬೆಳಕಿನ ಸಮಸ್ಯೆಯಂಥ ಕಾರಣಗಳಿಂದ ಆಟ ಸ್ಥಗಿತಗೊಳ್ಳುವುದನ್ನು ನೋಡಿದ್ದೇವೆ. ಭಾನುವಾರ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ವಿಭಿನ್ನ ಕಾರಣಕ್ಕೆ ಕೆಲಕಾಲ ಆಟ ಸ್ಥಗಿತಗೊಂಡಿತು. ಐಪಿಎಲ್​ನ(IPL 2024) ರಾಜಸ್ಥಾನ್​ ರಾಯಲ್ಸ್(Rajasthan Royals)​ ಮತ್ತು ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ನಡುವಣ ಪಂದ್ಯ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಸ್ಪೈಡರ್ ಕ್ಯಾಮೆರಾದ(Spidercam ) ಕೇಬಲ್​ ಏಕಾಏಕಿ ತುಂಡಾಗಿ ಪಿಚ್​ ಮೇಲೆ ಬಿದ್ದಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್​ 2 ಎಸೆತಗಳನ್ನು ಎದುರಿಸಿದ್ದ ವೇಳೆ ಸ್ಪೈಡರ್ ಕ್ಯಾಮೆರಾದ ಕೇಬಲ್​ ತುಂಡಾಗಿ ಪಿಚ್ ಮೇಲೆ ಬಿದ್ದಿತು. ಬಳಿಕ ಮೈದಾನ ಸಿಬ್ಬಂದಿಗಳು ಇದನ್ನು ತೆರವುಗೊಳಿಸಿ ಸರಿಪಡಿಸಿದ ಬಳಿಕ ಪಂದ್ಯವನ್ನು ಮುಂದುವರಿಸಲಾಯಿತು.​