ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಬೆಂಗಳೂರು, ಮಾರ್ಚ್‌ 18 : ಪ್ರತಿ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಆಟಗಾರರು ಒಂದಲ್ಲ ಒಂದು ವಿಭಿನ್ನ ಶೈಲಿಯ ಗಡ್ಡ, ಹೇರ್​ ಸ್ಟೈಲ್​ಗಳನ್ನು ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ 17ನೇ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೂಡ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೊಹ್ಲಿಯ ಹೊಸ ಲುಕ್​ಗೆ(Virat Kohli’s new look) ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಕೊಹ್ಲಿಯ ಕಾಲೆಳೆದಿದ್ದಾರೆ. ಇದು ಧೋನಿ(ms dhoni hairstyle) ಹಾಗೂ ಇಶಾನ್​ ಕಿಶನ್​ ಅವರ ಕಾಪಿ ಎಂದು ಕಮೆಂಟ್​ ಮಾಡಿದ್ದಾರೆ.

ಧೋನಿ ಶೈಲಿ ಅನುಕರಣೆ ಮಾಡಿದ್ದ ಇಶಾನ್‌

ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಇದೇ ರೀತಿಯ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿದ್ದರು. ಧೋನಿ ಅವರ ಶೈಲಿ ಕೊಂಚ ಸಿಂಪಲ್‌ ಆಗಿತ್ತು. ಇದೇ ರೀತಿಯಲ್ಲಿ ಕಳೆದ ವರ್ಷ ಇಶಾನ್‌ ಕಿಶನ್​ ಕೂಡ ಹೇರ್‌ಸ್ಟೈಲ್‌ ಮಾಡಿದ್ದರು. ಇಶಾನ್ದ ಅವರ ಈ ಹೊಸ ಲುಕ್​ ಕಂಡು ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೇವಿಶಾ ಶೆಟ್ಟಿ ಇದು ಮುಳ್ಳು ಹಂದಿ ತರ ಕಾಣುತ್ತಿದೆ ಎಂದು ಕಮೆಂಟ್‌ ಮಾಡಿದ್ದರು. ಇದೀಗ ಕೊಹ್ಲಿಯ ಲುಕ್​​ ಕೂಡ ಧೋನಿ ಮತ್ತು ಇಶಾನ್ ಅವರ ಹೇರ್‌ಸ್ಟೈಲ್​ ನಂತೆ ಕಾಣಿಸಿದೆ. ಹಲವು ನೆಟ್ಟಿಗರು ಕಮೆಂಟ್‌ ಮಾಡಿದ್ದು ಇದು ಧೋನಿಯಿಂದ ಪಡೆದ ಪ್ರೇರಣೆಯಾಗಿದೆ ಎಂದಿದ್ದಾರೆ. ಧೋನಿ ಈ ಬಾರಿ ರೆಟ್ರೊ ಶೈಲಿಯ ಉದ್ದನೆಯ ಕೂದಲಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಇದೇ ಶೈಲಿಯಲ್ಲಿ ಕಾಣಿಸಿಕೊಳಡಿದ್ದರು.

ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್​ ಖರೀದಿಸಿದ್ದಾರೆ.

ವಿರಾಟ್‌ ಕೊಹ್ಲಿ ಸೋಮವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಅಕಾಯ್‌ ಜನನವಾದ ಬಳಿಕ ಭಾನುವಾರವಷ್ಟೇ ಕೊಹ್ಲಿ ಭಾರತಕ್ಕೆ ಮರಳಿದ್ದರು. ವಿರಾಟ್‌ ಕೊಹ್ಲಿ ಕಳೆದ ಐಪಿಎಲ್‌ನಲ್ಲಿ 2 ಶತಕ ಸೇರಿದಂತೆ 639 ರನ್‌ ಪೇರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಬಾರಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.