ಹೊನ್ನಾವರ ತಾಲೂಕಿನ ಗೇರುಸೊಪ್ಪಾದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಮಾರ್ಚ್ 29ರಿಂದ 30ರವರೆಗೆ ವೀರಾಂಜನೆಯ, ಗೋಪಾಲಕೃಷ್ಣ ಮತ್ತು ಚೌಡೇಶ್ವರಿ ದೇವಿಯ ವರ್ಧಂತಿ ಉತ್ಸವ ನಡೆಯಲಿದೆ…
ಶೋಭನ ಸಂವತ್ಸರದ ಪಾಲ್ಗುಣ ಮಾಸ ಶುಕ್ಲ ಪಕ್ಷದ ಚತುರ್ಥಿ ಹಾಗೂ ಪಂಚಮಿ ಶುಕ್ರವಾರ ಹಾಗೂ ಶನಿವಾರದಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೆಯ ದೇವರು, ಶ್ರೀ ಗೋಪಾಲಕೃಷ್ಣ ದೇವರು, ಶ್ರೀ ಅನ್ನ ಪೂರ್ಣೇಶ್ವರಿ ದೇವಿಯ ಮತ್ತು ಶ್ರೀ ಚೌಡೇಶ್ವರಿ ದೇವಿಯ ವರ್ದಂತಿ ಉತ್ಸವ ನೆರವೇರಲಿದೆ. ಸಮಸ್ತ ಭಕ್ತಾದಿಗಳು ಶ್ರದ್ಧಾ ಭಕ್ತಿ ಭಾವದಿಂದ ತಮ್ಮ ಬಂಧು ಬಾಂಧವರೊಡಗೂಡಿ ಆಗಮಿಸಿ ತನು-ಮನ-ಧನಗಳಿಂದ ಸೇವೆಗೈದು ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಮಾರೂತಿ ಗುರೂಜಿ ತಿಳಿಸಿದ್ದಾರೆ..
ಶುಕ್ರವಾರ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಶ್ರೀ ದೇವರ ಕಲಾವೃದ್ಧಿ ಹವನ, 28 ನಾಳಿಕೇರ ಗಣಹವನ ನಡೆಯಲಿದೆ. ಸಂಜೆ ರಾಕ್ಷೋಘ್ನ ಪಾರಾಯಣ, ರಾಕ್ಷೋಘ್ನ ಹವನ, ತಾರಕ ಮಂತ್ರ ಜಪ, ಆಂಜನೇಯ ಮೂಲಮಂತ್ರ ಜಪ, ಕಲಶ ಸ್ಥಾಪನೆ ನಡೆಯಲಿದೆ.
ಶನಿವಾರ ಬೆಳಗ್ಗೆ ಶತರುದ್ರ ಪಾರಾಯಣ, ರುದ್ರಾಭಿಷೇಕ-ರುದ್ರ ಹವನ, ಶ್ರೀ ದೇವರಿಗೆ ಫಲ- ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ರಾಜೋಪಚಾರ ಸೇವೆ, ಪಲ್ಲಕ್ಕಿ ಉತ್ಸವ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ನಡೆಯಲಿದೆ. ಸಂಜೆ ಪಲ್ಲಕ್ಕಿ ಉತ್ಸವ, ರಾಜೋಪಚಾರ ಸೇವೆ, ರಂಗಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಸಂತರ್ಪಣೆ ನಡೆಯಲಿದೆ..