ಮುಂಡಗೋಡ: ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಸೋಮವಾರ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಿಣಾಧಿಕಾರಿಗಳ ಕಛೇರಿ ಹಾಗೂ ಭಾರತ ಸೇವಾದಳದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಧ್ವಜ ನಿರ್ವಹಣೆ ತರಬೇತಿ ಕಾರ್ಯಾಗಾರ ನಡೆಯಿತು.
ತಹಶೀಲ್ದಾರ ಶಂಕರ ಗೌಡಿ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ವಿವಿಧ ಇಲಾಖೆ, ಬ್ಯಾಂಕ್, ಸಂಘ-ಸಂಸ್ಥೆ ಸಿಬ್ಬಂದಿಗಳ ಮನೆ ಮನೆ ಮೇಲೆ ಧ್ವಜ ಹಾರಿಸಬೇಕು. ಅಲ್ಲದೆ ಪ್ರತಿ ಮನೆಯ ಮೇಲೆ ಧ್ವಜ ಹಾರಿಸುವ ಹಾಗೇ ನೋಡಿಕೊಳ್ಳುವಂತೆ ಕರೆ ನೀಡಿದರು. ಧ್ವಜ ನಿರ್ವಹಣೆ ಮಾಡುವವರು ಹಾಗೂ ಮುಖ್ಯಸ್ಥರಿಗೆ ಆರೋಹಣ, ಅವರೋಹಣ ರಾಷ್ಟ್ರ ಧ್ವಜ ಕಟ್ಟುವ ಪದ್ಧತಿ ಬಗ್ಗೆ ಮಾಹಿತಿ ನೀಡಿದರು.
ಬಿಇಒ ವಿ ಎಸ್ ಪಟಗಾರ, ತಾಲೂಕು ಆಸ್ಪತ್ರೆಯ ಆಡಳಿತಧಿಕಾರಿ ಡಾ ಎಚ್.ಎಫ್ ಇಂಗಳೆ, ಪ.ಪಂ ಮುಖ್ಯಾಧಿಕಾರಿ ಎಂ.ಎಸ್ ಹಿರೇಮಠ, ಆರ್.ಎಫ್.ಒ ಸುರೇಶ ಕುಳ್ಳೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.