ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ದೊಡ್ಡ ಕೆರೆ ಭರ್ತಿಯಾಗಿ ಕೊಡಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದ ಪರಿಣಾಮ ಕೆರೆ ಒಡೆಯುವ ಹಂತದಲ್ಲಿದೆ ಎಂದು ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಪಾಳಾ ಗ್ರಾಮದಲ್ಲಿರುವ ಬೃಹತ್ ಆಕಾರದ 33 ಎಕರೆಗಳಷ್ಟು ಪ್ರದೇಶದಲ್ಲಿ ಕೆರೆಯಿದೆ. ಈ ಕೆರೆಯಿಂದ ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಭೂಮಿಗೆ ನೀರು ಹಾಯುತ್ತದೆ. ಆದರೆ ಕೆರೆಯ ಕೊಡಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದ ಕಾರಣ ಇದೀಗ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಕೆರೆ ಒಡೆಯವ ಆತಂಕ ಗ್ರಾಮಸ್ಥರು ಹಾಗೂ ರೈತರನ್ನು ಕಾಡುತ್ತಿದೆ.
ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಈ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಆದರೆ ಹೆಚ್ಚುವರಿ ನೀರು ಹರಿದು ಹೋಗಲು ಸರಿಯಾದ ಕಾಲುವೆಗಳಿಲ್ಲದೆ ಕೆರೆಯಲ್ಲಿ ಅಪಾರ ಪ್ರಮಾಣ ನೀರು ಸಂಗ್ರಹವಾಗಿದ್ದು ಇದರಿಂದ ಕೆರೆಯ ಒಡ್ಡು ಒಡೆಯುವ ಸಾದ್ಯತೆಗಳಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಥಾಕು ಸುಕ್ರು ಗೌಡ ಹಾಗೂ ಆರ್.ಎನ್.ನಾಯ್ಕ ಸೋಮವಾರ ಬೆಳಗ್ಗೆ ಕೆರೆ ವೀಕ್ಷಣೆ ಮಾಡಲು ಹೋಗಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಕೆರೆ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದರಿಂದ ಅಲ್ಲಿ ಹೆಚ್ಚುವರಿ ನೀರು ಹರಿದು ಹೋಗಬೇಕಾದ ನೀರಿನ ಕೊಡಿ ಚಿಕ್ಕದಾಗಿ ಕಟ್ಟಲಾಗಿದೆ. ಈಗ ಏನು ಮಾಡಲು ಸಾಧ್ಯವಾಗುವುದಿಲ್ಲ ಆದರಿಂದ ಇದ್ದ ಪರಿಸ್ಥಿತಿಯಲ್ಲಿ ನೀರು ಹರಿದು ಹೋಗುವಂತೆ ಮಾಡಿ ಕೊಡವಂತೆ ಸೂಚಿಸಿದ್ದೇನೆ. ಕೆರೆಯಿಂದ ಯಾವ ಹಾನಿ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಅತಿಕ್ರಮಣ ಮಾಡಿಕೊಂಡ ಮನೆ ನಿರ್ಮಾಣ ಮಾಡಿಕೊಂಡ ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ.
– ಶಂಕರ ಗೌಡಿ, ತಹಶೀಲ್ದಾರ