ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಇಂದು ಒಂಬತ್ತು ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು, ಕಾರವಾರ- 2, ಕುಮಟಾ-2, ಹಳಿಯಾಳ-4, ಜೋಯಿಡಾ-1 ಪಾಸಿಟಿವ್ ಕೇಸ್ ವರದಿಯಾಗಿದೆ.
ನಾಲ್ಕು ಜನರು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 65 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು, 69 ಸಕ್ರಿಯ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಂದ 824 ಜನ ಮೃತಪಟ್ಟಿದ್ದು, ಈವರೆಗೆ 71,295 ಜನ ಕರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಅತೀ ಹೆಚ್ಚು ಸಾವು ಸಂಭವಿಸಿದ್ದೆಲ್ಲಿ.?
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಕೊರೋನಾದಿಂದ ಕಾರವಾರದಲ್ಲಿ 129 ಜನ ಮೃತಪಟ್ಟಿದ್ದಾರೆ. ಇದರ ನಂತರ ಹಳಿಯಾಳದಲ್ಲಿ 128 ಜನ ಮೃತರಾಗಿದ್ದು, ಹೊನ್ನಾವರ, ಶಿರಸಿಯಲ್ಲಿ ತಲಾ 112 ಜನ ಮೃತಪಟ್ಟಿದ್ದಾರೆ.