ಯಲ್ಲಾಪುರದ ಯುವತಿ ನಾಪತ್ತೆ!

ಯಲ್ಲಾಪುರ ಮಾರ್ಚ್‌ 13 : ಯುವತಿಯೊಬ್ಬಳು ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಪುರ ತಾಲೂಕಿನ ಚಂದ್ಗುಳಿಯ ದೇಸಾಯಿಮನೆ ತೇಜಾ ರಾಮಕೃಷ್ಣ ಭಟ್ಟ (26)ಕಾಣೆಯಾದ ಯುವತಿ.

ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಕಳೆದ ಡಿಸೆಂಬರ್ 20 ರಂದು ಹುಬ್ಬಳ್ಳಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದು, ಅಲ್ಲಿಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಈವರೆಗೂ ಮರಳಿ ಬಂದಿಲ್ಲ. ಈ ಕುರಿತು ತಂದೆ ರಾಮಕೃಷ್ಣ ಎಸ್ ಭಟ್ಟ ದೇಸಾಯಿಮನೆ ಪೋಲಿಸ್ ದೂರು ನೀಡಿದ್ದಾರೆ.

ಸಾಧಾರಣ ಮೈಕಟ್ಟು, ದುಂಡನೆಯ ಮುಖ, 5.2 ಅಡಿ ಎತ್ತರ, ಗೋಧಿ ಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ, ಇಂಗ್ಲಿಷ್ ಮಾತನಾಡುತ್ತಾಳೆ. ಹಳದಿ ಬಣ್ಣದ ಚೂಡಿದಾರ ಧರಿಸಿದ್ದಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08419-261133, ಯಲ್ಲಾಪುರ ಪೊಲೀಸ್ ನಿರೀಕ್ಷಕರ ದೂ. ಸಂ: 9480805757 ಹಾಗೂ ಪಿ.ಎಸ್.ಐ ದೂ.ಸಂ: 9480805273 ನ್ನು ಸಂಪರ್ಕಿಸುವಂತೆ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.