ಯಲ್ಲಾಪುರದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ, ವಾಯುಮಾಲಿನ್ಯ ಜಾಗೃತಿ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಯಲ್ಲಾಪುರದ ಆಶೀಯ ಸಮಾಜ ಸೇವಾ ಸಂಸ್ಥ ವತಿಯಿಂದ ವಾಯುಮಾಲಿನ್ಯದ ಜಾಗೃತಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.


ಸಂಸ್ಥೆಯ ಅಧ್ಯಕ್ಷ ಅನಿಲ್ ಮರಾಠೆ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನ ಮಲಿನಗೊಳಿಸದೇ, ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅಪಾಯ ನಿಶ್ಚಿತ. ನಾವು ನಿತ್ಯ ಉಪಯೋಗಿಸುವ ಪ್ಲಾಸ್ಟಿಕ್ ಸುಡುವುದರಿಂದ ಮತ್ತು ಇನ್ನಿತರ ವಿಷಾನಿಲಗಳಿಂದ ಗ್ಲೋಬಲ್ ವಾರ್ಮಿಂಗ್ ಹೆಚ್ಚುತ್ತಿದೆ. ಭೂಮಿಯ ರಕ್ಷಾ ಕವಚವಾದ ಓಜೋನ್ ಪದರಕ್ಕೆ ಹಾನಿಯಾಗುತ್ತಿದೆ. ಇದು ಪ್ರಕೃತಿಯ ವಿಕೋಪಕ್ಕೂ ಕಾರಣವಾಗುತ್ತದೆ ಎಂದು ವಿವರಿಸಿದರು.
ಸಂಸ್ಥೆಯ ಸದಸ್ಯ ವಿಜಯ್ ನಾಯ್ಕ ಅವರು ಸ್ವಚ್ಛತೆ ಹಾಗೂ ವಿವಿಧ ರೋಗಗಳಿಗೆ ಕೈ ಸರಿಯಾಗಿ ತೊಳೆಯದೇ ಇರುವುದೇ ಮುಖ್ಯ ಕಾರಣ ಎಂದರು.
ಸದಸ್ತೆ ಫರ್ಜಾನಾ ಶೇಖ್ ಅವರು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪ್ರೇರಣೆ ಮೂಡಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಗಂಗಾಧರ ನಾಯ್ಕ್, ಮುಸರತ್ ಶೇಖ್, ಆಯಿಷಾ ಗುಜನೂರು ಉಪಸ್ಥಿತರಿದ್ದರು. ಶಿಕ್ಷಕ ನವೀನಕುಮಾರ ಸ್ವಾಗತಿಸಿ ವಂದಿಸಿದರು.