ಗಾಯಾಳುಗಳ ಸಂಖ್ಯೆ 10ಕ್ಕೂ ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ. ಬೃಹತ್ ರಥ ಕುಸಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ವೈರಲ್ (viral video) ಆಗಿದೆ.
ಚೆನ್ನೈ ಮಾರ್ಚ್ 10 : ದೇವಾಲಯದ ಜಾತ್ರೋತ್ಸವವೊಂದರ ಭಾರಿ ಗಾತ್ರದ ರಥ (Chariot collapse) ತಮಿಳುನಾಡಿನಲ್ಲಿ ಕುಸಿದುಬಿದ್ದಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ. ಅದರಡಿಯಲ್ಲಿ ಹಲವು ಮಂದಿ ಸಿಲುಕಿಹಾಕಿಕೊಂಡಿದ್ದು, ಗಾಯಾಳುಗಳ ಸಂಖ್ಯೆ 10ಕ್ಕೂ ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ. ಬೃಹತ್ ರಥ ಕುಸಿಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ವೈರಲ್ (viral video) ಆಗಿದೆ.
ತಮಿಳುನಾಡಿನ ವೆಲ್ಲೂರಿನ ಮಾಯಾನ ಕೊಲ್ಲೈ ಉತ್ಸವಕ್ಕಾಗಿ ನಿರ್ಮಿಸಲಾಗಿದ್ದ 60 ಅಡಿ ಎತ್ತರದ ರಥ ಶನಿವಾರ ಕುಸಿದು ಬಿದ್ದಿದೆ. ಗತಿಸಿದವರ ಗೌರವಾರ್ಥ ನಡೆಸುವ ಮಾಯಾನ ಕೊಲ್ಲೈ ಉತ್ಸವದ ಆಚರಣೆಯ ಅಂಗವಾಗಿ ಎಲೆಯಲಾಗುತ್ತಿದ್ದ ರಥವು ಅಂಗಲಪರಮೇಶ್ವರಿ ಅಮ್ಮನವರ ವಿಗ್ರಹವನ್ನು ಹೊತ್ತಿತ್ತು. ಇದು ಪಾಲಾರ್ ನದಿಯ ದಡದಲ್ಲಿ ಸಾಗುತ್ತಿತ್ತು.
ನೂರಾರು ಸಂಖ್ಯೆಯಲ್ಲಿದ್ದ ಭಕ್ತರು ರಥವನ್ನು ತಿರುಗಿಸಲು ಪ್ರಯತ್ನಿಸಿದಾಗ, ಅದು ಸಮತೋಲನವನ್ನು ಕಳೆದುಕೊಂಡಿತು. ರಥದ ಮೇಲ್ಭಾಗವು ಕುಸಿದು, ಅದರ ಅಡಿಯಲ್ಲಿ ಹಲವರು ಸಿಕ್ಕಿಬಿದ್ದರು. ವೀಕ್ಷಕರು ಅವರನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.