ಭಟ್ಕಳ ಮಾರ್ಚ್ 9 : ಭಟ್ಕಳ ತಾಲೂಕಿನ ಬೆಳಕೆಯಲ್ಲಿ ಸಚಿವರಾದ ಮಂಕಾಳ ವೈದ್ಯರು, ಕೃತಕ ಬಂಡೆಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿದ್ರು. ಈ ವೇಳೆ ಶಾಸಕರು ಸಮುದ್ರಕ್ಕೆ ಧುಮುಕಿ ಶವಾಸನ ಮಾಡಿ ಗಮನ ಸೆಳೆದಿದ್ದಾರೆ..
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರು, ಭಟ್ಕಳ ತಾಲೂಕಿನ ಬೆಳಕೆಯಲ್ಲಿ, ಕೃತಕ ಬಂಡೆಗಳ ಸ್ಥಾಪನೆಗೆ ಚಾಲನೆ ನೀಡಿದ್ರು. ಮೀನುಗಳ ಉತ್ಪತಿಗೆ ಪೂರಕವಾಗಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸುವ ಯೋಜನೆ ಇದಾಗಿದೆ..
ಯೋಜನೆಗೆ ಚಾಲನೆ ನೀಡಿದ ಸಚಿವರು ಸಮುದ್ರಕ್ಕೆ ದುಮುಕಿ ಈಜು ಹೊಡೆದು ಆನಂದಿಸಿದ್ರು. ಬಳಿಕ ಸಚಿವರು
ಶವಾಸನ ಮಾಡಿ ಗಮನ ಸೆಳೆದ್ರು. ಬಳಿಕ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ಸಚಿವರು, ಯೋಜನೆಗೆ ಚಾಲನೆ ನೀಡಿದ ಬಳಿಕ ಖುಷಿಯಾಯ್ತು. ಹೀಗಾಗಿ ಸಮುದ್ರಕ್ಕಿಳಿದು ಈಜಾಡಿದ್ದೇನೆ. ಈಜು ಆರೋಗ್ಯಕ್ಕೆ ಒಳ್ಳೆಯದ್ದು. ಎಲ್ಲರೂ ಈಜುವುದನ್ನು ಕಲಿಯಿರಿ ಎಂದು ಹೇಳಿದ್ರು…
ಒಟ್ನಲ್ಲಿ ಮೀನುಗಾರರಿಗೆ ಅನುಕೂಲವಾಗುವ ಯೋಜನೆಗೆ ಚಾಲನೆ ನೀಡಿದ ಖುಷಿಯಲ್ಲಿ ಸಚಿವರು, ಸಮುದ್ರಕ್ಕೆ ಹಾರಿ ಈಜು ಹೊಡೆದು ಆನಂದಿಸಿದ್ದಾರೆ…