ಧಾರಕಾರ ಮಳೆಗೆ ಮನೆ ಕುಸಿದು ಹಾನಿ

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲಕೊಪ್ಪ ಗ್ರಾಮದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದು ಹಾನಿಯಾದ ಘಟನೆ ಜರುಗಿದೆ. ಮಹಾದೇವ ಗುಬ್ಬಕ್ಕನವರ ಎಂಬುವರ ಮನೆ ಹಾನಿಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸೋಮವಾರ ಬೆಳಗಿನ ಜಾವ ಆಕಸ್ಮಿಕವಾಗಿ ಗೋಡೆಗಳು ಮಳೆಯ ನೀರಿಗೆ ಒದ್ದೆಯಾಗಿ ಕುಸಿದು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಶೀಲನೆ ಮಾಡಿ ಮೇಲಧಿಕಾರಿಗಳಿಗೆ ವರದಿ ನಿಡಿದ್ದಾರೆ