ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಕಾರವಾರದಲ್ಲಿ ನಡೆಯುತ್ತಿರುವ ಪಡ್ತಿ ಸಮಾಜದ ಪಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ ಅವರು ಉದ್ಘಾಟಿಸಿದ್ರು…
ಬಳಿಕ ಮಾತನಾಡಿದ ರೂಪಾಲಿಯವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಪಂದ್ಯಾವಳಿ ಆಡಲು ಬಂದ ಎಲ್ಲ ತಂಡಗಳು ಉತ್ತಮವಾಗಿ ಆಟವಾಡಬೇಕು. ಕೇವಲ ಗೆಲುವಿಗಾಗಿಯೇ ಆಡುವುದಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ಕೊಟ್ರು…
ಇದೇ ವೇಳೆ ದೇಶದ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಾದವರಿಗೆ ರೂಪಾಲಿ ಎಸ್ ನಾಯ್ಕ ಅವರು ಸನ್ಮಾನಿಸಿ ಗೌರವಿಸಿದ್ರು. ನಾವು ಇಲ್ಲಿ ಬದುಕುವುದಕ್ಕೆ ಗಡಿಯಲ್ಲಿ ಕಾಯುವ ಸೈನಿಕರು ಕಾರಣ. ಅವರು ಶತ್ರುಗಳಿಂದ ರಕ್ಷಿಸುವುದರಿಂದ ನಾವು ಇಲ್ಲಿ ಬದುಕಬಹುದಾಗಿದೆ. ನಮ್ಮ ಸಮಾಜದವರು ಇಷ್ಟು ಜನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರೆ ನನಗೆ ಹೆಮ್ಮೆ ಎನ್ನಿಸುತ್ತದೆ. ಅಂತಹವರನ್ನು ಇಂದು ಸನ್ಮಾನಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರೂಪಾಲಿ ನಾಯ್ಕ ಅವರು ಹೇಳಿದ್ರು…
ಪಡ್ತಿ ಸಮಾಜದ ಟೂರ್ನಮೆಂಟ್‌ಗೆ ವಿಶೇಷವಾಗಿ ಸಹಕರಿಸಿದ ರೂಪಾಲಿ ಎಸ್ ನಾಯ್ಕ ಅವರಿಗೆ, ಪಡ್ತಿ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಪಡ್ತಿ ಸಮಾಜದ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು, ಮುಖಂಡರು, ಕ್ರೀಡಾಪಟುಗಳು ಉಪಸ್ಥಿತರಿದ್ದರು…