ಕಾರವಾರ: ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಈ ಯೋಜನೆಯಡಿ ಮುಂದಿನ ಆರ್ಥಿಕ ನೆರವು ಪಡೆಯಲು ಆ. 15ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿಸಿದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ.
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ತಮ್ಮ ತಾಲ್ಲೂಕಿನ ಹತ್ತಿರದ ಸಿ.ಎಸ್.ಸಿ (ನಾಗರೀಕ ಸೇವಾ ಕೇಂದ್ರ) ಅಥವಾ ಗ್ರಾಮಒನ್ ಸೇವಾ ಕೇಂದ್ರಗಳಲ್ಲೂ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ http://pmkisan.gov.in ಪೋರ್ಟಲ್ನಲ್ಲಿ ಓಟಿಪಿ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದುದರಿಂದ ಜಿಲ್ಲೆಯ ಎಲ್ಲಾ ಅರ್ಹ ರೈತ ಭಾಂದವರು ಮುಂದಿನ ಆರ್ಥಿಕ ನೆರವು ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಕಾರವಾರ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.