ಶಿರಸಿ: ದೇವರ ಕುರಿತಾಗಿನ ಹಾರ್ದಿಕ ಪ್ರೀತಿಯೇ ಭಕ್ತಿ. ನಿಜವಾದ ಭಕ್ತ ಭಗವಂತನಲ್ಲಿ ಕೇಳುವುದು ಭಕ್ತಿಯನ್ನೇ. ಭಕ್ತಿಯೇ ಆನಂದ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಯಲ್ಲಾಪುರ ಸೀಮೆ ಹಾಗೂ ನಗರದ ಶಿಷ್ಯರಿಂದ ಪಾದ ಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಭಗವಂತನಲ್ಲಿ ನಿಜವಾಗಿ ಭಕ್ತ ಕೇಳುವದು ಭಕ್ತಿಯನ್ನೇ ಎಂದು ಪ್ರಹ್ಲಾದನ ಉದಾಹರಣೆ ಜೊತೆ ಆಶೀರ್ವಚನ ನೀಡಿದ ಶ್ರೀಗಳು, ಶಂಕರ ಭಗವತ್ಪಾದರ ಸ್ತ್ರೋತ್ರಗಳು ನಿಜವಾದ ಭಕ್ತಿ ಸಾಹಿತ್ಯ. ಆ ಸ್ತೋತ್ರ ಪಠಣ ಮಾತೆಯರಿಗೆ ಮಾತ್ರ ಸೀಮಿತವಲ್ಲ, ಮಹನೀಯರೂ ಕಲಿಯಬಹುದು. ಶಂಕರರ ಭಕ್ತಿ ಸಾಹಿತ್ಯ ಅಸದೃಶವಾದುದು ಎಂದರು.
ಭಕ್ತಿ ಯೋಗ ಭಗವದ್ಗೀತೆಯ ಮುಖ್ಯ ವಿಷಯ. ಭಕ್ತಿನೇ ಭಗವದ್ಗೀತೆ ಮುಖ್ಯ. ಏಕೆಂದರೆ ಮುಕ್ತಾಯ ಮಾಡುವದೇ ಭಗವಂತ ಅದರೊಳೆಗೆ ಎಂದರು.
ಈ ವೇಳೆ ನಾಗೇಶ ಹೆಗಡೆ ಪಣತಗೇರಿ, ಸುಬ್ರಾಯ ವಿ. ಹೆಗಡೆ, ಕೃಷ್ಣ ಬೋಡೆ, ಸುಬ್ರಾಯ ಭಟ್ಟ, ರಮಾ ದೀಕ್ಷಿತ ಉಪಸ್ಥಿತರಿದ್ದರು. ಇದೇ ವೇಳೆ ಮಳಲಗಾಂವ ಕಾವೇರಕ್ಕ ದಂಪತಿಗಳನ್ನು ಗೌರವಿಸಲಾಯಿತು.
ಭಗವಂತನ ಬಗ್ಗೆ ಮನಸ್ಸು ಶುದ್ದಕ್ಕೆ ಕರ್ಮಯೋಗ ಮೊದಲು. ಮನಸ್ಸು ಶುದ್ದವಾದಾಗ ಮನಸ್ಸು ಅವನಲ್ಲಿ ನಿಲ್ಲುತ್ತದೆ. ಮನಸ್ಸು ಭಗವಂತನಲ್ಲಿ ನಿಲ್ಲಬೇಕು.
– ಸ್ವರ್ಣವಲ್ಲೀ ಶ್ರೀ