ಅಂಕೋಲಾ ಇಂದಿರಾ ಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ

ಅಂಕೋಲಾ : ಪಟ್ಟಣದ ಹೊನ್ನೇಕೇರಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ಮುಂಜಾನೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸಂಜೆ ವಾರ್ಷಿಕ ಶಾಲಾ ಸಂಭ್ರಮ ಅತಿ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಆರ್ ಜಿ ಗುಂದಿ ‘ಪಾರಿಜಾತ ‘ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಸತಿ ಶಾಲೆಯಲ್ಲಿ ಓದುವ ಮಕ್ಕಳು ಅದೃಷ್ಟವಂತರು ಎಂದು ಹೇಳಿದರು.
ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಬೆಳಸೆಯ ಅಶೋಕ ಗಾಂವಕರ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಗಂಗೆಕೊಳ್ಳದ ಪ್ರಾಚಾರ್ಯ ನಾರಾಯಣ ನಾಯಕ, ಮೊರಾರ್ಜಿ ವಸತಿ ಶಾಲೆ ಹೆಗಡೆ ಪ್ರಾಂಶುಪಾಲ ರಾಜು ಗಾಂವಕರ ಕುಮಟಾ ಅತಿಥಿಗಳಾಗಿ ಆಗಮಿಸಿದರು.
ವಸತಿ ಶಾಲೆಯ ಪ್ರಾಂಶುಪಾಲ ವಿನೋದ ಗಾಂವಕರ ಕಾರ್ಯಕ್ರಮದ ಅಧ್ಯಕ್ಷ ಮಾತನಾಡಿ, ಸಾಧಿಸುವ ಛಲ ಎಲ್ಲರಲ್ಲಿಯೂ ಆವಶ್ಯಕ. ಆದರೆ ತಮ್ಮ ಸಾಧನೆಯ ಸಮಯದಲ್ಲಿ ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡುವುದೇ ನಿಜವಾದ ಸಾಧನೆ. ವಿದ್ಯಾರ್ಥಿಗಳು ತಮ್ಮ ತನವನ್ನು ಇನ್ನೊಬ್ಬರಲ್ಲಿ ಅಳೆದು ನೋಡಬಾರದು. ಪೋಷಕರು ತಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲಎಂದರು.

ರಾಧಾ ಪಡ್ತಿ ಸ್ವಾಗತಿಸಿದರು. ರಾಘವೇಂದ್ರ ಪಡ್ತಿ ಶಾಲೆಯ ಆದರ್ಶ ವಿದ್ಯಾರ್ಥಿಯನ್ನು ಘೋಷಿಸಿ, 2022-23ನೇ ಸಾಲಿನಲ್ಲಿ 6 ರಿಂದ 9ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿದರು.
ತಸ್ನೀಮ ಖಾನ, ಲಲಿತಾ ಗೌಡ, ಸವಿತಾ ಗಾಂವಕರ, ಪ್ರಕಾಶ ನಾಯ್ಕ್, ಪಾರ್ವತಿ ಮಾದರ ಉಪಸ್ಥಿತರಿದ್ದರು.
ಶರೀಫ ಮುಲ್ತಾನಿ ಹಾಗೂ ಪುಷ್ಪಾ ನಾಯ್ಕ ಸಹಕರಿಸಿದರು. ಸುಷ್ಮಾ ನಜರೆತ ವಂದಿಸಿದರು ಹಾಗೂ ಅನುರಾಧ ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.