ಅಂಕೋಲಾ : ಕನಸೆಗದ್ದೆಯ ಶ್ರೀ ನರಸಿಂಹ ಭಜನಾ ಮಂಡಳಿಯ ಭಜನಾ ಸಪ್ತಾಹದ ಪ್ರಯುಕ್ತ ಸಾಂಸ್ಕ್ರತಿಕ ಕಾರ್ಯಕ್ರಮಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಛದ್ಮವೇಷ ಕಾರ್ಯಕ್ರಮ ಶನಿವಾರ ರಾತ್ರಿ ಅತ್ಯಂತ ವಿಶಿಷ್ಟವಾಗಿ ಜರುಗಿತು. ಶ್ರಂಗಾರ ಜ್ಯುವೆಲರ್ಸ್ ಪ್ರಾಯೋಜಕತ್ವದಲ್ಲಿ ಕಿರಿಯರ ಛದ್ಮವೇಷ ಸ್ಪರ್ಧೆಯಲ್ಲಿ ಚಿಣ್ಣರು ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದರು. ಬಿಣಗಾದ ಮ್ಹಾಳಸಾ ನಾರಾಯಣಿ ಯುವಕ ಮಂಡಳದವರು ಅತ್ಯಾಕರ್ಷಕವಾಗಿ ಛದ್ಮವೇಷ, ಸ್ತಬ್ದಚಿತ್ರ ಹಾಗೂ ನೃತ್ಯರೂಪಕಗಳನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಭಾರತದ ಪ್ರಸಿದ್ಧ ದೇವಾಲಯಗಳ ಪ್ರತಿರೂಪದ ಸೆಟ್ಟುಗಳು ಹಾಗೂ ದೇವತೆಗಳ ಪಾತ್ರಗಳು ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೂರಕ್ಕೂ ಹೆಚ್ಚು ಕಲಾವಿದರು 4 ತಾಸುಗಳ ಕಾಲ ಅದ್ಭುತ ಪ್ರದರ್ಶನಗಳನ್ನು ನೀಡಿದರು. ಮಂಡಳಿಯ ಹಿರಿಯರಾದ ಹಾಗೂ ಛದ್ಮವೇಷ ಕಾರ್ಯಕ್ರಮದ ಪ್ರಾಯೋಜಕರಾದ ಮಧುಕರ ವಿ ರಾಯ್ಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಮಂಡಳಿಯ ಮಾಜಿ ಅಧ್ಯಕ್ಷ ಗಜು ವಿ ನಾಯ್ಕ, ನಿರ್ದೇಶಕರಾದ ಗಂಗಾಧರ ಭೋವಿ, ರಾಘವೇಂದ್ರ ಮಹಾಲೆ, ಗೋವಿಂದ ಎಸ್ ನಾಯ್ಕ, ರಾಜೇಶ ಶೆಟ್ಟಿ, ಕಿರಣ ರಾಯ್ಕರ, ನಿರ್ಣಾಯಕರಾಗಿ ಆಗಮಿಸಿದ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ಶಿವಾನಂದ ನಾಯ್ಕ ಅಲಗೇರಿ, ನಿವೃತ್ತ ಶಿಕ್ಷಕ ಸಾತು ಗೌಡ ಬಡಗೇರಿ, ತಾ. ಪಂ. ಮಾಜಿ ಅಧ್ಯಕ್ಷ ವಿನೋದ ಗಾಂವಕರ ಉಪಸ್ಥಿತರಿದ್ದರು. ಮಂಡಳಿಯ ಉಪಾಧ್ಯಕ್ಷ ಅಶೋಕ ಜೆ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಸುರೇಶ ಭೋವಿ ಪ್ರಾರ್ಥಿಸಿದರು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರ್ವಹಿಸಿದರು. ನರೇಶ ರಾಯ್ಕರ ಛದ್ಮವೇಷ ಸ್ಪರ್ಧೆಯ ಬಹುಮಾನಗಳನ್ನು ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಂಡಳಿಯ ಅಧ್ಯಕ್ಷರಾದ ನಾಗರಾಜ ಜಾಂಬಳೇಕರ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಇದೇ ವೇಳೆ ದಿ. ನಾಗೇಶ ಮಹಾಲೆ ಸ್ಮರಣಾರ್ಥ ರಾಘವೇಂದ್ರ ಮಹಾಲೆ ಪ್ರಾಯೋಜಿಸಿದ ಮೆಹಂದಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.